ಪರಂಪರೆಯ ಹಿನ್ನೊಟ: ಮನೆತನದ ನೋಟ

ಕಳೆದ ಬಾರಿ ಮಾಂಬಾಡಿ ನಾರಾಯಣ ಭಾಗವತರ ಪುತ್ರಿಯರ ಹಾಗೂ ಅವರ ಮಕ್ಕಳ ಕುರಿತು ಪ್ರಸ್ತಾಪಿಸಲಾಗಿತ್ತು. ಇಲ್ಲಿದೆ ಅವರ ಪುತ್ರರ ವಿವರ:

ಮಾಂಬಾಡಿ ನಾರಾಯಣ ಭಾಗವತರಿಗೆ ನಾಲ್ವರು ಪುತ್ರರು. ಗೋಪಾಲಕೃಷ್ಣ, ಸುಬ್ರಹ್ಮಣ್ಯ, ಗಣಪತಿ ಮತ್ತು ನಾರಾಯಣ. ಇವರಲ್ಲಿ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾಗವತರ ಪರಂಪರೆಯನ್ನು ಮುಂದುವರಿಸಿದವರು. ಉಳಿದವರು ಬೇರೆ ಉದ್ಯೋಗಗಳನ್ನು ಅರಸಿಕೊಂಡು ವಿವಿಧೆಡೆ ನೆಲೆಸಿದರು. ಆದರೆ ಎಲ್ಲರಿಗೂ ಯಕ್ಷಗಾನದ ಹಿಮ್ಮೇಳದ ನಂಟಿದೆ.

ಗೋಪಾಲಕೃಷ್ಣ ಭಟ್

ಮಾಂಬಾಡಿ ನಾರಾಯಣ ಭಾಗವತರ ಹಿರಿಯ ಪುತ್ರ ಮಾಂಬಾಡಿ ಗೋಪಾಲಕೃಷ್ಣ ಭಟ್. ಇವರಿಗೀಗ 71 ವರ್ಷ. ಹಿಂದಿನ ಕೆಇಬಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿ ವಿವಿಧೆಡೆ ಕಾರ್ಯನಿರ್ವಹಿಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತರಾದವರು. ಯುವಕರಾಗಿದ್ದಾಗ ಹವ್ಯಾಸಿಯಾಗಿ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿದ್ದರು. ಪತ್ನಿ ಮನೋರಮಾ. ಇವರಿಗೆ ಇಬ್ಬರು ಪುತ್ರರು. ಹರೀಶ ಮಾಂಬಾಡಿ ಪತ್ರಕರ್ತ. ಅಶೋಕ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಇಬ್ಬರೂ ವಿವಾಹಿತರು. ಹರೀಶ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅಶೋಕ ಅವರಿಗೆ ಓರ್ವ ಪುತ್ರಿ. ಎಲ್ಲರೂ ಯಕ್ಷಗಾನ ಆಸಕ್ತರು. ಆದರೆ ವೃತ್ತಿಯಾಗಿ ಕ್ಷೇತ್ರದಲ್ಲಿಲ್ಲ. ಗೋಪಾಲಕೃಷ್ಣ ಭಟ್ ಅವರು ಬಿ.ಸಿ.ರೋಡಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯ ಭಟ್