ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿದ ಭಾಸ್ಕರ್ ರಾವ್ ಬೀಳ್ಕೊಡುಗೆ ಸಮಾರಂಭ ತಾ.ಪಂ. ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಜರಗಿತು.
ಜಾಹೀರಾತು
ಅಕಾರಿಗಳು ಜನಸ್ನೇಹಿಯಾದರೆ ಮಾತ್ರ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಈ ಮಾತಿಗೆ ಭಾಸ್ಕರ್ ರಾವ್ ರವರ ಸೇವೆ ಉತ್ತಮ ನಿದರ್ಶನ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಭಾಸ್ಕರ್ ರಾವ್ ಕ್ರಿಯಾಶೀಲ ಅಕಾರಿ ಎಂದು ತಹಶೀಲ್ದಾರ್ ಪುರಂದರ ಈ ಸಂದರ್ಭ ಹೇಳಿದರು.
ಉಪತಹಶೀಲ್ದಾರ್ ಪರಮೇಶ್ವರ ನಾಯಕ್, ಆಹಾರ ಶಾಖೆಯ ಶ್ರೀನಿವಾಸ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳು , ಗ್ರಾಮಕರಣಿಕರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಗ್ರಾಮ ಕರಣಿಕರ ಸಂಘದ ಅಧ್ಯಕ್ಷ ಜನಾರ್ಧನ್ ವಂದಿಸಿದರು. ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ನಿವೃತ್ತ ಉಪತಹಶೀಲ್ದಾರ್ ಭಾಸ್ಕರ ರಾವ್ ಬೀಳ್ಕೊಡುಗೆ"