ಮುಸ್ಲಿಮರು ಒಂದಾಗಿ ಹೋರಾಡಲು ಕರೆ

ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅಲ್-ಖಝಾನ ಸಬಾಂಗಣದಲ್ಲಿ ಗೆಟು ಗೆದರ್(ಸ್ನೇಹಕೂಟ) ಕಾರ್ಯಕ್ರಮದಲ್ಲಿ ಪ್ರಸಕ್ತ ವಿದ್ಯಾಮನಗಳು ಅದರ ಅಪಾಯದ ಬಗ್ಗೆ ಜಾಗ್ರತಿ ಮೂಡಿಸಿ ಮಾತನಾಡಿದರು .

ದೇಶದಲ್ಲಿ ಧರ್ಮಾಧಾರಿತ ಧ್ರುವೀಕರಣ ನಡೆಯುತ್ತಿದ್ದು, ಮಾಂಸದ ಹೆಸರಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದೆ. ತಿನ್ನುವ ಆಹಾರಕ್ಕೆ ನಿರ್ಬಂದ ಹೇರಲಾಗುತ್ತಿದ್ದು, ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ. ಅನ್ಯಾಯ, ಅಸಹಿಷ್ಣುತೆ ಪ್ರಶ್ನಿಸಿದವರನ್ನು ದಮನಿಸಲಾಗುತ್ತಿದ್ದು, ಮುಸ್ಲಿಂ ದ್ವೇಷಕ್ಕೆ ಮಾನ್ಯತೆ ಲಭಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.