
ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ವಿವಿಧ ಅಂಗನವಾಡಿ ಕಂ-ಕ್ರಷ್ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುದ್ದೆಗಳ ವಿವರ:
- ಕಂ-ಕ್ರಷ್ ಕಾರ್ಯಕರ್ತೆ ಹುದ್ದೆಗಳು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್-4ರ ವಿಟ್ಲ ಮಹಿಳಾ ಮಂಡಲ, ವಾರ್ಡ್-3ರ ಉಕ್ಕುಡ, ವೀರಕಂಭ ಗ್ರಾಮದ ಮಂಗಿಲಪದವು ಮತ್ತು ಅಳಿಕೆ ಗ್ರಾಮದ ಭೀಮಾರ ಅಂಗನವಾಡಿ ಕೇಂದ್ರಗಳು.
- ಕಂ-ಕ್ರಷ್ ಸಹಾಯಕಿ ಹುದ್ದೆಗಳು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್-4ರ ವಿಟ್ಲ ಮಹಿಳಾಮಂಡಲ, ವಾರ್ಡ್-3ರ ಉಕ್ಕುಡ, ವಾರ್ಡ್-2ರ ಚಂದಳಿಕೆ, ಕೊಳ್ನಾಡು ಗ್ರಾಮದ ಸೇರ್ಕಳ, ಅಳಿಕೆ ಗ್ರಾಮದ ಭೀಮಾರ, ಕೆದಿಲ ಗ್ರಾಮದ ಗಡಿಯಾರ ಹಾಗೂ ವೀರಕಂಭ ಗ್ರಾಮದ ಮಂಗಿಲಪದವು ಅಂಗನವಾಡಿ ಕೇಂದ್ರಗಳು.
ವಿದ್ಯಾರ್ಹತೆ ಮತ್ತು ವಯೋಮಿತಿ:
- ಕಾರ್ಯಕರ್ತೆ ಹುದ್ದೆ: ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಒಂದು ವೇಳೆ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ 10ನೇ ತರಗತಿ (ಎಸ್ಎಸ್ಎಲ್ಸಿ) ಉತ್ತೀರ್ಣರಾದವರನ್ನು ಪರಿಗಣಿಸಲಾಗುವುದು.
- ಸಹಾಯಕಿ ಹುದ್ದೆ: 10ನೇ ತರಗತಿ ಉತ್ತೀರ್ಣರಾಗಿರಬೇಕು. ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ 7ನೇ ತರಗತಿ ಉತ್ತೀರ್ಣರಾದವರನ್ನು ಪರಿಗಣಿಸಲಾಗುವುದು. (ಸೂಚನೆ: ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ).
- ವಯೋಮಿತಿ ಹಾಗೂ ನಿವಾಸಿ ನಿಯಮ: ಆಯಾ ಅಂಗನವಾಡಿ ಸರ್ವೇ ವ್ಯಾಪ್ತಿಯಲ್ಲಿ ವಾಸವಿರುವ 18 ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಮಾಸಿಕ ಗೌರವಧನ:
- ಕಾರ್ಯಕರ್ತೆಯರಿಗೆ ರೂ. 5,500/-
- ಸಹಾಯಕಿಯರಿಗೆ ರೂ. 3,000/-
ಪ್ರಮುಖ ದಿನಾಂಕಗಳು ಮತ್ತು ಸಂಪರ್ಕ ಮಾಹಿತಿ: ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ನವೆಂಬರ್ 23, 2026 ರಿಂದ ಡಿಸೆಂಬರ್ 07, 2026 ರೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ಅವಧಿಯಲ್ಲಿ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಚೇರಿಯನ್ನು (ದೂರವಾಣಿ: 08255-238080) ಸಂಪರ್ಕಿಸುವಂತೆ ಕೋರಲಾಗಿದೆ.



Be the first to comment on "ವಿಟ್ಲ: ಅಂಗನವಾಡಿ ಕಂ-ಕ್ರಷ್ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ"