ಕಡೇಶಿವಾಲಯ ಗ್ರಾಮದಲ್ಲಿ 5.5 ಕೋಟಿ ರೂ ವೆಚ್ಚದ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಕುರಿತು ಮುಖಂಡರ ವಿಶ್ವಾಸ

ಬಂಟ್ವಾಳ:ಕಡೇಶಿವಾಲಯ ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸುಮಾರು ೫.೫೦ ಕೋ.ರೂ.ಗಳ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.

ಜಾಹೀರಾತು

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡೇಶಿವಾಲಯ ಸಹಿತ ಬಂಟ್ವಾಳ ಕ್ಷೇತ್ರದ ಎಲ್ಲ ಗ್ರಾಮಗಳ ಜನರ ಆಶೋತ್ತರ ಈಡೇರಿಕೆಗೆ ಶ್ರಮಿಸಿದ್ದೇನೆ. ಇಂದು ಬಿಜೆಪಿ ವಿಶ್ವದಲ್ಲೇ ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದ್ದು, ಜಗತ್ತು ಗಮನಿಸುವ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಜೆಪಿ ಸ್ಥಾಪನೆಗೆ ಕಾರಣವಾದ ಆಶಯಗಳನ್ನು ಈಡೇರಿಸಿವೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ, ಬಂಟ್ವಾಳ ಕ್ಷೇತ್ರದಲ್ಲೂ ಜನತೆ ಪಕ್ಷದತ್ತ ವಿಶ್ವಾವಿಟ್ಟಿರುವುದು ಇದಕ್ಕೆ ಸಾಕ್ಷಿ ಎಂದರು. 

ಜಾಹೀರಾತು

ಕಾರ್ಯಕ್ರಮದಲ್ಲಿ ಕಡೇಶ್ವಾಲ್ಯ ದೇವಸ್ಥಾನ ೯೦ ಲಕ್ಷ ರೂ.ಗಳ ತಡೆಗೋಡೆ ಕಾಮಗಾರಿ ವೀಕ್ಷಣೆ, ಆರಿಕಲ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಡೆಗೋಡೆ ೫೦ ಲಕ್ಷ ರೂ, ಪೆರ್ಲಾಪು-ಕೊರತಿಗುರಿ-ಕುಡುಕುಮೇರು ರಸ್ತೆ-೧.೨೦ ಕೋ.ರೂ, ಶೇರಾ-ನೀರಕಜೆ ರಸ್ತೆ-೧೦ ಲಕ್ಷ ರೂ, ಮುಂಡಾಲ ಕಿರುಸೇತುವೆ-೧೦ ಲಕ್ಷ ರೂ, ಬಟ್ರಬೆಟ್ಟು-ಬೋರುಗುಡ್ಡೆ ರಸ್ತೆ ೩೦ ಲಕ್ಷ ರೂ, ಇರ್ಕ್ಲಾಜೆ-ಬೀರಕೋಡಿ ರಸ್ತೆ-೫ ಲಕ್ಷ ರೂ, ಪಡ್ಡಂಗೆ-ಕಾಡಬೆಟ್ಟು ರಸ್ತೆ-೧೦ ಲಕ್ಷ ರೂ, ಓಡಲು ರಸ್ತೆ-೧೮ ಲಕ್ಷ ರೂ, ಅಮೈ-ಹಿರ್ತಡ್ಕ ರಸ್ತೆ ೧೦ ಲಕ್ಷ ರೂ, ತಾರಿಗುರಿ ರಸ್ತೆ-೧೦ ಲಕ್ಷ ರೂ, ಗ್ರಾ.ಪಂ.ಅಮೃತ ಸೋಲಾರ್ ವ್ಯವಸ್ಥೆ-೮ ಲಕ್ಷ ರೂ, ಕೊರತಿಗುರಿ ಸಾರ್ವಜನಿಕ ಶೌಚಾಲಯ-೫ ಲಕ್ಷ ರೂ. ಹಾಗೂ ಎಲ್ಲಾಜೆ-ತಾರಿಗುರಿ ರಸ್ತೆ ೧೦ ಲಕ್ಷ ರೂ. ಉದ್ಘಾಟಿಸಲಾಯಿತು.

ಜಾಹೀರಾತು

ನಡ್ಯೇಲು-ಮುನ್ನಿಮಾರು ರಸ್ತೆ-೧೦ ಲಕ್ಷ ರೂ, ಬೊಳ್ಳಾರು-ಭಂಡರಿಬೆಟ್ಟು ರಸ್ತೆ-೧೦ ಲಕ್ಷ ರೂ, ಮುಂಡಾಲ-ಪ್ರತಾಪನಗರ ರಸ್ತೆ ೧೦ ಲಕ್ಷ ರೂ, ಓಣಿಬಾಗಿಲು-ಬನಾರಿ ರಸ್ತೆ-೨೦ ಲಕ್ಷ ರೂ, ಕುರುಬ್ಲಾಜೆ-ಕೊರತಿಗುರಿ ರಸ್ತೆ ೧೦ ಲಕ್ಷ ರೂ, ಬೋರುಗುಡ್ಡೆ-ಗುಮ್ಮೊಡಿ ರಸ್ತೆ-೧೦ ಲಕ್ಷ ರೂ, ಕಲ್ಲಾಜೆಪಲ್ಕೆ-ಮುಂಡಾಲ ರಸ್ತೆ ೫ ಲಕ್ಷ ರೂ, ತಾರಿಗುರಿ-ದಾಳಿಂಬ ರಸ್ತೆ ೨೫ ಲಕ್ಷ ರೂ, ಗ್ರಾ.ಪಂ.ಅಮೃತ ಭವನ-೨೫ ಲಕ್ಷ ರೂ, ಮುಚ್ಚಿಲ-ನೇಜಿನಡ್ಕ ರಸ್ತೆ-೧೦ ಲಕ್ಷ ರೂ, ಮುಚ್ಚಿಲ-ಕಾಡಬೆಟ್ಟು ರಸ್ತೆ ೧೮ ಲಕ್ಷ ರೂ. ಶಿಲಾನ್ಯಾಸ ನೆರವೇರಿಸಲಾಯಿತು.

ಜಾಹೀರಾತು

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಡೇಶ್ವಾಲ್ಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್., ಕಡೇಶ್ವಾಲ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿದ್ಯಾಧರ್ ರೈ ಪೆರ್ಲಾಪು, ಕಡೇಶ್ವಾಲ್ಯ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಸಪಲ್ಯ, ಗ್ರಾ.ಪಂ.ಉಪಾಧ್ಯಕ್ಷೆ ಜಯಾ ಆರ್.ದೇವಾಡಿಗ, ಕಡೇಶ್ವಾಲ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸಾಂತಪ್ಪ ಪೂಜಾರಿ, ಬೂತ್ ಸಮಿತಿಯ ಅಧ್ಯಕ್ಷರುಗಳು, ಗ್ರಾ.ಪಂ.ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಕಡೇಶಿವಾಲಯ ಗ್ರಾಮದಲ್ಲಿ 5.5 ಕೋಟಿ ರೂ ವೆಚ್ಚದ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಕುರಿತು ಮುಖಂಡರ ವಿಶ್ವಾಸ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*