ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಒತ್ತಾಯಿಸಿ 17ರಂದು ಹಗಲು ರಾತ್ರಿ ಧರಣಿ: ರಮಾನಾಥ ರೈ – Details

ಬಂಟ್ವಾಳ: ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿನ ಕುರಿತು ಹಲವು ಹೇಳಿಕೆಗಳು ಬರುತ್ತಿದ್ದರೂ ಅಧಿಕೃತವಾಗಿ ಇನ್ನೂ ಯಾರೂ ಯಾವಾಗ ತೆರವಾಗುತ್ತದೆ ಎಂದು ಘೋಷಿಸಿಲ್ಲ. ಅಲ್ಲದೆ, ಅದರ ನವೀಕರಣ ಕೆಲಸ ಕಾರ್ಯಗಳೂ ನಡೆಯುತ್ತಿರುವುದು ಕಾಣಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ರಾಜಕೀಯರಹಿತವಾಗಿ 24 ತಾಸುಗಳ ಹಗಲು ರಾತ್ರಿ ಧರಣಿ ನವೆಂಬರ್ 17ರ ಬೆಳಗ್ಗೆ 9.30ರಿಂದ 18ರ ಬೆಳಗ್ಗೆ 9.30ರವರೆಗೆ ನಡೆಯಲಿದೆ.

ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಹೆದ್ದಾರಿಗಳಲ್ಲಿ ಬೇಕಾಬಿಟ್ಟಿ ಟೋಲ್ ಗೇಟ್ ಗಳನ್ನು ತೆರೆಯಬಾರದು. ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ. ಟೋಲ್ ಅವಧಿ ಮುಗಿದರೂ ಅದು ಮುಂದುವರಿಯುತ್ತಿರುವುದು ಕಂಡುಬಂದಿದ್ದು, ಯಾರೊಬ್ಬ ಸಾರ್ವಜನಿಕರೂ ಅದು ಮುಂದುವರಿಯಬೇಕು ಎಂದು ಹೇಳುತ್ತಿಲ್ಲ. ಯಾರಿಗೂ ಬೇಡವಾದ ಟೋಲ್ ತೆರವುಗೊಳಿಸುವುದೇ ಸೂಕ್ತ ಎಂದು ರೈ ಹೇಳಿದರು.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಹಲವು ಸಮಸ್ಯೆಗಳು ಉಂಟಾಗಿದ್ದು ಅವುಗಳನ್ನೆಲ್ಲಾ ಜನರು ಸಹಿಸಿಕೊಂಡಿದ್ದಾರೆ, ಇನ್ನು ಟೋಲ್ ಕಟ್ಟುವುದೂ ದುಬಾರಿಯಾಗುತ್ತಿದ್ದು ಅತ್ಯಂತ ಅವೈಜ್ಞಾನಿಕವೂ ಆಗಿದೆ ಎಂದು ಹೇಳಿದ ಅವರು ಈಗಾಗಲೇ ಎರಡು ಹೋರಾಟಗಳು ಯಶಸ್ವಿಯಾಗಿದ್ದು, ಮುಂದಿನ ಭಾಗವಾಗಿ ಟೋಲ್ ಮುಚ್ಚುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

Bhadra Home Appliances

ಸಮಿತಿಯ ಸಂಚಾಲಕ ಬಿ.ಶೇಖರ್ ಮಾತನಾಡಿ, ನಾವು ಪ್ರಚಾರಕ್ಕೋಸ್ಕರ ಹೋರಾಟವನ್ನು ಮಾಡುತ್ತಿಲ್ಲ. ಟೋಲ್ ಮುಚ್ಚಲಾಗುವುದು ಎಂಬ ಮಾತುಗಳು ಬಂದಿವೆಯೇ ಹೊರತು, ಯಾವಾಗ ಮುಚ್ಚಲಾಗುತ್ತದೆ ಎಂಬ ನಿರ್ದಿಷ್ಟ ದಿನಾಂಕವನ್ನಾಗಲೀ ಗಡುವನ್ನಾಗಲೀ ನೀಡಿಲ್ಲ. ಪ್ರಾಧಿಕಾರವಾಗಲಿ ಅಥವಾ ಸಂಬಂಧಪಟ್ಟವರಾಗಲೀ ಟೋಲ್ ಕುರಿತು ಸ್ಪಷ್ಟ ವಿಚಾರವನ್ನು ಒದಗಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಮೋಹನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಒತ್ತಾಯಿಸಿ 17ರಂದು ಹಗಲು ರಾತ್ರಿ ಧರಣಿ: ರಮಾನಾಥ ರೈ – Details"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*