
ಬಿ.ಸಿ.ರೋಡಿನಲ್ಲಿರುವ ಎಸ್ಜಿಎಸ್ವೈ ತಾಲೂಕು ಪಂಚಾಯತ್ ಸಭಾಭವನದಲ್ಲಿ ಪಿಎಂಆರ್ಕೆವಿವೈ ‘ವಿವೇಚನಾಯುಕ್ತ ಪೀಡೆನಾಶಕ ಬಳಕೆ ಕುರಿತ ರೈತ ಅರಿವು ಕಾರ್ಯಕ್ರಮ’ದಡಿ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು.

ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕ ವಿಶ್ವನಾಥ್ ವಹಿಸಿದ್ದರು. ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜೋ ಪ್ರದೀಪ್ ಡಿ’ಸೋಜಾ ಅವರು ವಿವೇಚನಾಯುಕ್ತ ಪೀಡೆನಾಶಕ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ (ತಾಂತ್ರಿಕ) ನಂದನ್ ಶೆಣೈ ಪಿ. ಅವರು ರೈತರಿಗೆ ‘ಮುಖ್ಯಮಂತ್ರಿ ನೇಗಿಲ ಯೋಜನೆ’ ಹಾಗೂ ‘ರಸಗೊಬ್ಬರ ಮಾರಾಟ ಚೌಕಟ್ಟು’ ಮೊಬೈಲ್ ಆಪ್ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಆತ್ಮ ಪಾಣೆಮಂಗಳೂರು ವಿಭಾಗದ ಎಟಿಎಂ ಹನಮಂತ ಕಾಳಗಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ಆತ್ಮ ಯೋಜನೆ ಬಂಟ್ವಾಳದ ಬಿಟಿಎಂ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು. ಎಟಿಎಂ ಚಂದ್ರಕಲಾ ಸ್ವಾಗತಿಸಿ, ವಿಟ್ಲ ವಿಭಾಗದ ಎಟಿಎಂ ವಿರೂಪಾಕ್ಷಿ ಹಡಪದ ವಂದಿಸಿದರು. ಬಂಟ್ವಾಳ ತಾಲೂಕಿನ ಕೃಷಿ ಪರಿಕರ ಮಾರಾಟಗಾರರು, ಕೃಷಿ ಸಖಿಯರು, ಗ್ರಾಮ ಒನ್ ಹಾಗೂ ಸಿಎಸ್ಸಿ ಕೇಂದ್ರದ ಸಿಬ್ಬಂದಿ ಮತ್ತು ರೈತ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.


Be the first to comment on "ಬಂಟ್ವಾಳ: ರೈತರಿಗೆ ಅರಿವು ಕಾರ್ಯಕ್ರಮ"