ಬಂಟ್ವಾಳ: ಮೆಲ್ಕಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಸುಸಜ್ಜಿತ ನೂತನ ಕಟ್ಟಡಕ್ಕೆ ಅಕ್ಟೋಬರ್ 12ರಂದು ಸ್ಥಳಾಂತರಗೊಳ್ಳಲಿದೆ.

ಸಂಘದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೀಗ ಮೆಲ್ಕಾರ್ ಸರ್ವೀಸ್ ರಸ್ತೆಯ ಬಳಿಯೇ ಇರುವ ಸರಾ ಆರ್ಕೇಡ್ ನಲ್ಲಿರುವ ಪ್ರಥಮ ಮಹಡಿಗೆ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿ ನೀಡಿದ ಅವರು, ಪ್ರಧಾನ ಕಚೇರಿ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ನೆರವೇರಿಸುವರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ರಮಾನಾಥ ರೈ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಗುರುಕೃಪ, ರಾಜೇಂದ್ರ ಹೊಳ್ಳ, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ. ಭಾಗವಹಿಸುವರು ಎಂದರು. ಸಂಘವು ಪ್ರಸಕ್ತ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಸ್ವಂತ ಕಟ್ಟಡ ಹೊಂದುವ ಅಪೇಕ್ಷೆ ಹೊಂದಿದೆ. ಚಿನ್ನಾಭರಣಗಳಿಗೆ ಗರಿಷ್ಠ ಸಾಲ, ಕನಿಷ್ಠ ಬಡ್ಡಿ ಸಹಿತ ಭದ್ರತೆಯ ಆಧಾರದ ಮೇಲೆ ಸಾಲ ಸೌಲಭ್ಯವಿದ್ದು, ಉತ್ತಮ ವಸೂಲಾತಿ ದಾಖಲೆ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯಾನಂದ ಪೆರಾಜೆ, ನಿರ್ದೇಶಕರಾದ ರವೀಂದ್ರ ಕುಕ್ಕಾಜೆ, ವೃತ್ತಿಪರ ನಿರ್ದೇಶಕ ರಾಕೋಡಿ ಈಶ್ವರ ಭಟ್ ಮತ್ತು ಸಲಹಾ ಸಮಿತಿ ಸದಸ್ಯ ಕೃಷ್ಣ ಶರ್ಮಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವ್ಯಾ ಉಪಸ್ಥಿತರಿದ್ದರು.




Be the first to comment on "12ರಂದು ಶಂಕರ ಪತ್ತಿನ ಸಹಕಾರ ಸಂಘ ನೂತನ ಕಟ್ಟಡಕ್ಕೆ ಸ್ಥಳಾಂತರ"