ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಪೆರುವಾಯಿಯ ವೀರ ಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಪೆರುವಾಯಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ವತಿಯಿಂದಸ. 13ರ ಭಾನುವಾರ ಸಂಜೆ ಅದ್ಧೂರಿ ಹುಟ್ಟೂರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕುದ್ದುಪದವು ದಿವ್ಯ ಶಕ್ತಿ ಯುವಕ ಮಂಡಲದಿಂದ ಪೆರುವಾಯಿಯ ಕಲ್ಲಡ್ಕದವರೆಗೆ ಸುಮಾರು 10 ಕಿ.ಮೀ. ಬೃಹತ್ ವಾಹನ ಜಾಥಾ ನಡೆಯಿತು.ಊರಿನ ಹಿರಿಯರಾದ ನಿವೃತ್ತ ಶಿಕ್ಷಕ ರಾಮಯ್ಯ ಶೆಟ್ಟಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ 200ಕ್ಕೂ ಅಧಿಕ ವಾಹನಗಳು ಹಾಗೂ 600ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಜಾಥಾ ಸಾಗಿದ ಮಾರ್ಗದುದ್ದಕ್ಕೂ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹರ್ಷೋದ್ಗಾರಗಳೊಂದಿಗೆ ವೀರ ಯೋಧನಿಗೆ ಆತ್ಮೀಯ ಸ್ವಾಗತ ಕೋರಿದರು. ಮಾರ್ಗಮಧ್ಯದ ಹಲವು ಕಡೆಗಳಲ್ಲಿ ಆರತಿ ಬೆಳಗಿ, ಗೌರವ ಸಮರ್ಪಿಸಿ ಯೋಧನ ಸೇವೆಯನ್ನು ಸ್ಮರಿಸಲಾಯಿತು.ಕುದ್ದುಪದವು ದಿವ್ಯ ಶಕ್ತಿ ಯುವಕ ಮಂಡಲದ ವತಿಯಿಂದಲೂ ಗೌರವಾರ್ಪಣೆಯೊಂದಿಗೆ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.
ದೇಶದ ಗಡಿಯನ್ನು ಕಾಯುವ ಹೊಣೆಗಾರಿಕೆಯಲ್ಲಿ 23 ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿದ ಯೋಧನಿಗೆ ತಾಯ್ನಾಡಿನ ಜನತೆ ತೋರಿದ ಪ್ರೀತಿ, ಗೌರವ ಮತ್ತು ಅಭಿಮಾನ ಕಾರ್ಯಕ್ರಮದ ಪಕ್ಷತೀತವಾಗಿ ವಿವಿಧ ವರ್ಗಗಳ ಜನರು ಭಾಗವಹಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದರು.


Be the first to comment on "23 ವರ್ಷ ದೇಶಸೇವೆ ಬಳಿಕ ಹುಟ್ಟೂರಿಗೆ ಮರಳಿದ ಯೋಧ, ಅದ್ಧೂರಿ ಸ್ವಾಗತ, 10 ಕಿ.ಮೀ. ವಾಹನ ಜಾಥಾ; 200ಕ್ಕೂ ಅಧಿಕ ವಾಹನ"