
ಬಂಟ್ವಾಳ: ಸೆಪ್ಟೆಂಬರ್ 18ರವರೆಗೆ ನಡೆಯಲಿರುವ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಚಾಲನೆ ನೀಡಲಾಯಿತು.

ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸುಧಾಕರ ಆಚಾರ್ಯ, ಹನೀಫ್ ಹಾಜಿ, ಪದ್ಮನಾಭ ಕೋಟ್ಯಾನ್, ಶಿವಪ್ರಸಾದ್ ರೈ, ಪಿಯೂಸ್ ಎಲ್. ರೋಡ್ರಿಗಸ್ ಸಹಿತ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಉಪಾಧ್ಯಕ್ಷರಾಧ ಚಂದ್ರಪ್ರಕಾಶ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಚಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ಎಂ.ರಾಜೀವ ಶೆಟ್ಟಿ, ಕಾರ್ಯದರ್ಶಿಗಳಾದ ಎನ್.ಮಹಾಬಲ ಬಂಗೇರ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಜಗನ್ನಾಥ, ವಾಸು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಕೆ.ಮಾಯಿಲಪ್ಪ ಸಾಲ್ಯಾನ್, ರಾಜೀವ ಕಕ್ಯಪದವು, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆರ್. ಅಂಚನ್, ಚಂದ್ರಶೇಖರ ಭಂಡಾರಿ, ಸೋಮಪ್ಪ ಪೂಜಾರಿ, ನಾರಾಯಣ, ಸುರೇಶ್ ಪೂಜಾರಿ, ಸುಧಾಕರ ಶೆಣೈ, ಪ್ರಮುಖರಾದ ಪ್ರವೀಣ್ ಜಕ್ರಿಬೆಟ್ಟು, ಜಗದೀಶ್ ಕುಂದರ್ ಸಹಿತ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.




Be the first to comment on "ಜಕ್ರಿಬೆಟ್ಟು: 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ"