ಪಚ್ಚಿನಡ್ಕ ಓಂ ಫ್ರೆಂಡ್ಸ್ ಕ್ಲಬ್ : 27ನೇ ವರ್ಷದ ಮೊಸರು ಕುಡಿಕೆ ಉತ್ಸವ

VNR GOLD

ಓಂ ಫ್ರೆಂಡ್ಸ್ ಕ್ಲಬ್ ( ರಿ ) ಕಳ್ಳಿಗೆ.ಪಚ್ಚಿನಡ್ಕ.ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 27 ವರ್ಷದ ಮೊಸರು ಕುಡಿಕೆ ಉತ್ಸವ ಶುಕ್ರವಾರ ಸಂಘದ ಶ್ರೀ ಕೃಷ್ಣ ವೇದಿಕೆ ಯ ವಠಾರ ದಲ್ಲಿ ಜರಗಿತು.

D.SHIVA BHAT JWELLERS

ಬೆಳಗ್ಗೆ ಶ್ರೀ ಕೃಷ್ಣ ದೇವರ ಪ್ರತಿಷ್ಠಾಪನೆ ನಡೆದು ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿಯವರಿಂದ ಮಧ್ಯಾಹ್ನದವರೆಗೆ ಭಜನಾ ಸಂಕೀರ್ತನೆ ನಡೆಯಿತು

.ನಂತರ ಮದ್ಯಾಹ್ನ ಹುಡುಗ,ಹುಡುಗಿಯರು.ಪುರುಷರ ಮತ್ತು ಮಹಿಳೆ ಯರ ವಿಭಾಗ ಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯೊಂದಿಗೆ ಚಿಲಿ ಪಿಲಿ ಗೊಂಬೆ ಬಳಗದ ಶಂಕರ ನಾರಾಯಣ ಹೊಳ್ಳ ಬಿಸಿರೋಡ್ ಹಾಗು ಬಿ.ಎಸ್.ಬ್ಯಾಂಡ್ ಸೆಟ್ ಬ್ರಹ್ಮರ ಕೂಟ್ಲು ಬಿ.ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು. ಸಂಘದ ಮಹಾ ಪೋಷಕರಾದ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಹಿರಿಯರಾದ ನಾರಾಯಣ ಆಚಾರ್ಯ ಕಳ್ಳಿಗೆ, ಸಂಘದ ಪದಾಧಿಕಾರಿಗಳಾದ ಸದಾಶಿವ ಆಚಾರ್ಯ,ರಾಜೇಶ್ ಆಚಾರ್ಯ,ಚರಣ್ ರಾಜ್ ಆಚಾರ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕರಾದ ಸಂತೋಷ್ ಪಚ್ಚಿನಡ್ಕ, ಪ್ರಶಾಂತ್ ಪಚ್ಚಿನಡ್ಕ, ಅಮಿತಾ ವಿಶ್ವನಾಥ್ ದಾಸರಕೋಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಹರೀಶ್ ಶೆಟ್ಟಿ ಪಡು ಹಾಗು ತೇಜಾಕ್ಷಿ ನಿರೂಪಿಸಿದರು.

ನಂತರ  ಶ್ರೀ ಕೃಷ್ಣ ದೇವರ ಶೋಭಾಯಾತ್ರೆ ಗೋರೆಮಾರ್ ನಿಂದ ಪಚ್ಚಿನಡ್ಕ ದ ವರೆಗೆ ಬಹಳ ವಿಜೃಂಭಣೆ ಯಿಂದ ಸಾಗಿತು. ಶ್ರೀ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ ಯ ಸದಸ್ಯರ ಕುಣಿತ ಭಜನೆಯೊಂದಿಗೆ ಸಾಗಿದ ಈ ಶೋಭಾ ಯಾತ್ರೆಯಲ್ಲಿ ಚಿಲಿಪಿಲಿ ಗೊಂಬೆ ಬಳಗ. ಬಿಸಿರೋಡ್ , ಬಿ.ಸ್.ಬ್ಯಾಂಡ್ ಸೆಟ್, ಬ್ರಹ್ಮರಕೂಟ್ಲು, ಪೊಳಲಿ ಯುವಕರ ನಾಸಿಕ್ ಬ್ಯಾಂಡ್, ಕೇಶವ ಸಜಿಪ ಅವರ ವಿವಿಧ ರೀತಿಯ ಗೊಂಬೆಗಳು ಪ್ರದರ್ಶನ ನೀಡಿದವು..

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಪಚ್ಚಿನಡ್ಕ ಓಂ ಫ್ರೆಂಡ್ಸ್ ಕ್ಲಬ್ : 27ನೇ ವರ್ಷದ ಮೊಸರು ಕುಡಿಕೆ ಉತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*