ನಾಗರಪಂಚಮಿ: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಭಕ್ತಿಶ್ರದ್ಧೆಯ ಆಚರಣೆ

OPTIC WORLD
VNR GOLD

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ  ಸಂಭ್ರಮ ಸಡಗರದ ನಾಗರಪಂಚಮಿ ಉತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವ ದಿಂದ ನೆರವೇರಿತು ಮುಂಜಾನೆ ನಾಲ್ಕು ಗಂಟೆಯಿಂದಲೇ ಭಕ್ತರು ಸರದಿಯ ಸಾಲಿನಲ್ಲಿಬಂದು ಶ್ರೀ ದೇವರ ದರ್ಶನ ಗೈದು ಪುನೀತರಾದರು.

ಸುಮಾರು 40 ಸಹಸ್ರಕ್ಕೂ ಮಿಕ್ಕಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನಗೈದರು. ನಾಗಬನದಲ್ಲಿರುವ ಸಹಸ್ರಾರು ನಾಗಬಿಂಬಗಳಿಗೆ ಮುಂಜಾನೆ 5:00 ಗಂಟೆಗೆ ವಿಶೇಷವಾದ ಜಲಾಭಿಷೇಕ, ಹಾಲು ಅಭಿಷೇಕ, ಸೀಯಾಳ ಅಭಿಷೇಕ , ಕಲ್ಪೋಕ್ತ ಪೂಜೆಯೊಂದಿಗೆ ಪಂಚಾಮೃತ ಅಭಿಷೇಕ ಹಾಗೂ  ನಾಗದೇವರಿಗೆ ವಿಶೇಷ ಮಹಾ ತಂಬಿಲ ಸೇವೆ ನಡೆದ ಬಳಿಕ ಮಹಾಪೂಜೆಯಾಯಿತು.

ಬಳಿಕ ಪ್ರತಿ ಒಂದು ಗಂಟೆಗೆ ಒಮ್ಮೆ ನಾಗಬನದಲ್ಲಿ ನಿರಂತರವಾಗಿ ನಾಗದೇವರಿಗೆ ತಂಬಿಲ ಸೇವೆಯ ಪೂಜೆ ಹಾಗೂ ಅಭಿಷೇಕಗಳು  ನಡೆಯುತ್ತಿತ್ತು ಪ್ರಧಾನ  ಶ್ರೀಅನಂತಪದ್ಮನಾಭ ದೇವರಿಗೆ ಪ್ರಾತಃಕಾಲದ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ನಡೆದ ಬಳಿಕ ವಿಶೇಷವಾದ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳಭಿಷೇಕ, ಸೇವೆಗಳು ನಡೆದ ಬಳಿಕ ವಿಶೇಷ ಕಲಶಾಭಿಷೇಕ ವಿದ್ಯುಕ್ತವಾಗಿ ನೆರವೇರಿತು

ಜಾಹೀರಾತು

ಬಳಿಕ ಶ್ರೀಅನಂತಪದ್ಮನಾಭ ದೇವರಿಗೆ ವಿವಿಧ ಅರ್ಚನೆಗಳಾದ ಅಷ್ಟೋತ್ತರ ರಚನೆ ಸಹಸ್ರನಾಮ ಅರ್ಚನೆ ಸೇವೆಗಳು ನಡೆದು ನಾಗರ ಪಂಚಮಿಯ ವಿಶೇಷ ಹಾಲು ಪಾಯಸ ಸೇವೆ  ನಡೆದ ಬಳಿಕ ಶ್ರೀ ಅನಂತಪದ್ಮನಾಭ ದೇವರನ್ನು ಸರ್ವಾಭರಣಗಳಿಂದ ಅಲಂಕರಿಸಿದ  ದೇವರಿಗೆ ವಿಶೇಷ ಹರಿವಾಣ ನೈವೇದ್ಯ ಸೇವೆ ಮಧ್ಯಾಹ್ನದ ವಿಶೇಷ ನೈವೇದ್ಯ ಸೇವೆ ಅರ್ಪಣೆಗೊಂಡಿತು.  ನಾಗರಪಂಚಮಿಯ  ಮಹಾಪೂಜೆ ನಡೆದ  ಬಳಿಕ ಭಕ್ತರಿಗೆ ಶ್ರೀದೇವರ ಪ್ರಸಾದ ರೂಪದಲ್ಲಿ ಮಹಾ ಅನ್ನಸಂತರ್ಪಣೆಯ ಕಾರ್ಯಕ್ರಮ ನಡೆಯಿತು ಸುಮಾರು 20 ಸಹಸ್ರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕಾರ ಮಾಡಿದರು 

D.SHIVA BHAT JWELLERS

ಮಧ್ಯಾಹ್ನ 1.30ಕ್ಕೆ ಸರಿಯಾಗಿ ನಾಗಬನದಲ್ಲಿ ನಾಗ ದೇವರಿಗೆ ಕ್ಷೇತ್ರದ ತಂತ್ರಿಗಳು ಹಾಗೂ ಅನುವಂಶಿಕ ಆಡಳಿತ ಮುಕ್ತೇಸರರಾದ ಕೆ. ನರಸಿಂಹ ತಂತ್ರಿ ಹಾಗೂ ಅನುವಂಶಿಕ ಮುಕ್ತೇಸರರು ಹಾಗೂ ಅರ್ಚಕರಾದ ಶ್ರೀ ಕೆ. ಮನೋಹರ ಭಟ್ ರವರ ಮುಂದಾಳುತ್ವದಲ್ಲಿ ಹಾಲು ಅಭಿಷೇಕ ,ಕ್ಷೀರ ಅಭಿಷೇಕ, ಜಲಾಭಿಷೇಕ ವಿಶೇಷ ನಾಗರ ಪಂಚಮಿಯ ಕಲ್ಪೋಕ್ತ ಪೂಜೆಯೊಂದಿಗೆ ಎಲ್ಲ ನಾಗ ಬಿಂಬಗಳನ್ನು ವಿಶೇಷ ಹೂವಿನ ಅಲಂಕಾರ ಮಾಡಿದ ಬಳಿಕ ಮಹಾನಾಗತಂಬಿಲಸೇವೆ  ಹಾಗೂ ಮಹಾ ನೈವೇದ್ಯ ಅರ್ಪಣೆಗೊಂಡಿತು ಬಳಿಕ ನಾಗರ ಪಂಚಮಿಯ ವಿಶೇಷ ಮಹಾ ಮಂಗಳಾರತಿ ನಡೆಯಿತು ನಾಗರ ಪಂಚಮಿಯ ವಿಶೇಷ ಸೇವೆಗಳಾದ ಪಂಚಾಮೃತ ಅಭಿಷೇಕ ನಾಗತಂಬಿಲ ಸೇವೆಗಳನ್ನು ಭಕ್ತರು ದೇವರಿಗೆ ಅರ್ಪಿಸಿದರು ಸುಮಾರು 15000 ಸಾವಿರ ತಂಬಿಲ ಸೇವೆ ಹಾಗೂ 4000 ಸಾವಿರ ಪಂಚಾಮೃತ ಸೇವೆಗಳು ಭಕ್ತರಿಂದ ದೇವರಿಗೆ ಅರ್ಪಣೆಗೊಂಡವು ಸುಮಾರು 30 ಸಹಸ್ರಕ್ಕೂ ಮಿಕ್ಕಿ ಗೇಂ ದಾಳಿ ಸೀಯಾಳ ಹಾಗೂ ಭಕ್ತರಿಂದ ವಿಶೇಷ ಹೂಗಳಾದ ಕೇದಗೆ, ಸಂಪಿಗೆ, ಮಲ್ಲಿಗೆ ಹಿಂಗಾರ ಹೂಗಳು ಹಾಗೂ ಚಿನ್ನ ಬೆಳ್ಳಿಯ ಹರಕೆಗಳನ್ನು ದೇವರಿಗೆ ಅರ್ಪಿಸಿದರು  ಸಂಜೆ 6 ಗಂಟೆಗೆ ಸರಿಯಾಗಿ ಪ್ರಧಾನ ಶ್ರೀ ಅನಂತ ಪದ್ಮನಾಭದೇವರಿಗೆ ದೇವಳದ ಭಂಡಾರದ ವತಿಯಿಂದ ದೇವಳದ ಚಾಂದ್ರ ಶಾಲೆಯಲ್ಲಿ ಕಲ್ಪೋಕ್ತ ಪೂಜೆ ಯುಕ್ತ ವಿಶೇಷ ಆಶ್ಲೇಷ ಬಲಿ ಸೇವೆ ದೇವರಿಗೆ ಅರ್ಪಣೆಗೊಂಡಿತು ಬಳಿಕ ದೇವರಿಗೆ ರಾತ್ರಿಯ ಮಹಾಪೂಜೆಯಾಗಿ ಭಗವದ್ ಭಕ್ತರಿಗೆ ಪ್ರಸಾದ ವಿತರಿಸಲಾಯಿತು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರವೀಣ್ ಕ್ಷೇತ್ರದ ಅನುವಂಶಿಕ ಮುಕ್ತೇಸರರು ಹಾಗೂ ಆಡಳಿತ ಮುಕ್ತೇಸರರಾದ ಶ್ರೀ ಕೆ ನರಸಿಂಹ ತಂತ್ರಿ ಅನುವಂಶಿಕ ಮುಕ್ತೇಸರರು ಹಾಗೂ ಅನುವಂಶಿಕ ಪವಿತ್ರ ಪಾಣಿ ಯಾಗಿರುವ  ಶ್ರೀ ಬಾಲಕೃಷ್ಣ ಕಾರಂತ ಅನುವಂಶಿಕ ಮುಕ್ತೇಸರರು ಹಾಗೂ ಅನುವಂಶಿಕ ಅರ್ಚಕರಾದ ಕೆ ಮನೋಹರ ಭಟ್ ಮುಕ್ತೇಸರರಾದ ಭಾಸ್ಕರ ಕೆ ಹಾಗೂ ಪ್ರಮುಖರಾದ ಕೆ ಕೃಷ್ಣರಾಜ ತಂತ್ರಿ ,ಸುಜನ್ ದಾಸ್ ಕುಡುಪು, ಉದಯಕುಮಾರ್ ಕುಡುಪು ಹಾಗೂ  ಊರ  – ಪರವೂರ ಭಗವದ್ಭಕ್ತರು ಉತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದ್ದರು ಆರಕ್ಷಕ ಠಾಣೆಯ ಸಿಬ್ಬಂದಿಯವರು ಹಾಗೂ ಸ್ವಯಂಸೇವಕರ ಮುಂದಾಳುತ್ವದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಎಲ್ಲರ ಗಮನ ಸೆಳೆಯಿತು

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ನಾಗರಪಂಚಮಿ: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಭಕ್ತಿಶ್ರದ್ಧೆಯ ಆಚರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*