ರಾಮಲ್ ಕಟ್ಟೆ: ಎಳೆಯರ ಬಳಗ ಅಶ್ರಯದಲ್ಲಿ  ಭಜನೆದ ವೊಟ್ಟಿಗೆ ಆಟಿದ ನೆಂಪು

ಎಳೆಯರ ಬಳಗ ರಾಮಲ್ ಕಟ್ಟೆ, ಎಳೆಯರ ಬಳಗ ಮಹಿಳಾ ಮಂಡಳಿ ಹಾಗೂ ಎಳೆಯರ ಬಳಗ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2ನೇ ವರ್ಷದ ಭಜನೆದ ವೊಟ್ಟಿಗೆ – ಆಟಿದ ನೆಂಪು ಕಾರ್ಯಕ್ರಮದಲ್ಲಿ ಊರಿನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ದೀಪ ಪ್ರಜ್ವಲನೆಯನ್ನು  ವಸಂತಿ ಸುರೇಶ್, ನೊಣಯ್ಯ ಪೂಜಾರಿ ರಾಮಲ್ ಕಟ್ಟೆ, ಶೇಖರ್ ಭಂಡಾರಿ ಹಾಗೂ ಭಜನಾ ಮಂಡಳಿಯ ಸಂಚಾಲಕರಾದ ಸಂತೋಷ್ ಕುಮಾರ್ ರಾಮಲ್ ಕಟ್ಟೆ ಧೂಮ ವಳವೂರು, ನವೀನ್ ರಾಮಲ್ ಕಟ್ಟೆ, ಅನಿಲ್ ರಾಮಲ್ ಕಟ್ಟೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಶ್ವಿನಿ ಜಯಪ್ರಕಾಶ್, ರಮಣಿ ಮೋಹನ್,ಯೋಗಿನಿ ಪ್ರವೀಣ್, ಕುಮಾರಿ ಸೌಮ್ಯ ಹಾಗೂ ಧನಶ್ರೀ ಪುಷ್ಪರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಾಹೀರಾತು
VNR GOLD

ಅಧ್ಯಕ್ಷತೆಯನ್ನು ಎಸ್.ವಿ.ಎಸ್. ಟೆಂಪಲ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ರೋಶನಿ ತಾರಾ ಡಿಸೋಜ ವಹಿಸಿದ್ದರು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಂಯಮ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಸಾರ್ ಅಹ್ಮದ್ ತುಂಬೆ, ಪ್ರಕಾಶ್ ಆಚಾರ್ಯ ರಾಮಲ್ ಕಟ್ಟೆ ಮಾತನಾಡಿದರು.

OPTIC WORLD

ಎಳೆಯರ ಬಳಗದ ಅಧ್ಯಕ್ಷರಾದ ಪೂಜೇಶ್ ರಾಮಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ  ವಸಂತ ಅಮೀನ್ ಗಾಣದ ಕೊಟ್ಯ, ಮಹಿಳಾ ಮಂಡಳಿ ಅಧ್ಯಕ್ಷರಾದ ವಸಂತಿ ವಸಂತ, ಕ್ಷೇತ್ರದ ಅರ್ಚಕರಾದ ಗುರುಪ್ರಸಾದ್ ಆಚಾರ್ಯ ಹಾಗೂ ಊರಿನ ಹಿರಿಯರಾದ ಗಂಗಾಧರ ಅಮೀನ್ ಗಾಣದ ಕೊಟ್ಯ ಮತ್ತು  ಪದ್ಮನಾಭ ಬೆಳ್ಚಡ ಕಲ್ಲಗುಡ್ಡೆ ಉಪಸ್ಥಿತರಿದ್ದರು.

ತ್ರಿಷಾ ಸತೀಶ್ ಸ್ವಾಗತಿಸಿ, ನಿಶಿಕಾ ಸುಶೀಲ್ ಪ್ರಸ್ತಾವಿಕ ಭಾಷಣ ಮಾಡಿದರು. ಹರ್ಷಿತಾ ಹರೀಶ್ ಅತಿಥಿಗಳ ಸನ್ಮಾನ ಹಾಗೂ ನುಡಿ ನಮನವನ್ನು ನಿರ್ವಹಿಸಿದರು. ಖುಷಿ ತಿಲಕ್ ಧನ್ಯವಾದ ಸಮರ್ಪಿಸಿದರು.  ಮಲ್ಲಿಕಾ ಧನಂಜಯ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ರಾಮಲ್ ಕಟ್ಟೆ: ಎಳೆಯರ ಬಳಗ ಅಶ್ರಯದಲ್ಲಿ  ಭಜನೆದ ವೊಟ್ಟಿಗೆ ಆಟಿದ ನೆಂಪು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*