
ಬಂಟರ ಸಂಘ ಬಿ ಸಿ ರೋಡ್ ವಲಯದ ಆಟಿದ ಕೂಟ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಹಿರಿಯ ಕೃಷಿಕ ಮಂಜಯ್ಯ ಶೆಟ್ಟಿ ನುಂಗೂರುಗುತ್ತು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಮುಖ್ಯ ಭಾಷಣಗಾರರಾದ ವಿಂಧ್ಯಾ ಸುಂದರ ರೈ ಮಾತನಾಡಿ ಮಕ್ಕಳನ್ನು ಕೇವಲ ದುಡ್ಡು ಮಾಡುವ ಯಂತ್ರಗಳನ್ನಾಗಿ ಮಾಡದೆ ಅವರು ಜವಾಬ್ದಾರಿಯುತನಾಗರಿಕರಾಗಿ ಸಮಾಜಮುಖಿ ಕೆಲಸ ಮಾಡುವ ಹಾಗೆ ತಯಾರು ಮಾಡುವ ಜವಾಬ್ದಾರಿ ತಂದೆ ತಾಯಿಗಳದ್ದು ಎಂದರು.

ಕಾರ್ಯಕ್ರಮದಲ್ಲಿ ಮಂಜಯ್ಯ ಶೆಟ್ಟಿಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕ್ರೀಡೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಲಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ ಬೆಳ್ಳಿಪಾಡಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಉಪಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಮಹಿಳಾ ಅಧ್ಯಕ್ಷರಾದ ಸುಜಾತಾ ಪಿ ರೈ, ಜಿಲ್ಲಾ ಪರಿಷತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು ಶುಭ ಕೋರಿದರು.

ಬಂಟ್ವಾಳ ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ನಗರಿ ಸಜಿಪ, ಜತೆ ಕೋಶಾಧಿಕಾರಿ ಶ್ರೀವಿದ್ಯಾ ಎ ರೈ, ಯುವ ವಿಭಾಗದ ಅಧ್ಯಕ್ಷರಾದ ಗೋಕುಲ್ ಭಂಡಾರಿ ಬೀಜದಾರುಗುತ್ತು, ತಾಲೂಕಿನ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ವಲಯದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.
ಬಿ ಸಿ ರೋಡ್ ವಲಯ ಬಂಟರ ಸಂಘದ ಅಧ್ಯಕ್ಷರಾದ ಶಂಕರ ಶೆಟ್ಟಿ ನಡ್ಯೋಡಿಗುತ್ತು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಜಗನ್ನಾಥ್ ರೈ ಮೇರಾವು ಸ್ವಾಗತ ಕೋರಿದರು. ಯುವ ವಿಭಾಗದ ಅಧ್ಯಕ್ಷ ನಿಶಿಲ್ ಆಳ್ವ ವಂದಿಸಿದರು.


Be the first to comment on "ಬಂಟರ ಸಂಘದ ಬಿ.ಸಿ.ರೋಡ್ ವಲಯದ ಆಟಿದ ಕೂಟ"