
ಬಂಟ್ವಾಳ: ಮಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಕಡೆ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ವಾಹನ ಜಾಥಾ ಮತ್ತು ಜಾಗೃತಿ ಸಭಾ ಕಾರ್ಯಕ್ರಮಗಳು ನಡೆದವು.


ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ವತಿಯಿಂದ ವಿಟ್ಲ ತಾಲೂಕು ವತಿಯಿಂದ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯ ಜಾಗರಣಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ರಾಜೇಶ್ ಬೊಳ್ಳುಕಲ್ಲು ವಹಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ನಿವೃತ್ತ ವಾಯುಸೇನೆ ಅಧಿಕಾರಿ ಶಿವರಾಮ ಭಟ್ ಕೆದಿಲ, ಜಾಗರಣ ವೇದಿಕೆಯ ಹಿರಿಯರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಪುಷ್ಪರಾಜ ಕಮ್ಮಾಜೆ ಹಾಗೂ ವಿಟ್ಲ ತಾಲೂಕು ಸಂಯೋಜಕ ನವೀನ್ ಕೋಲ್ಪೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಎ.ರುಕ್ಮಯ ಪೂಜಾರಿ, ಕ್ಷೇತ್ರ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಕ್ಷೇತ್ರ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಆರೆಸ್ಸೆಸ್ ಜಿಲ್ಲಾ ಸಹಕಾರ್ಯವಾಹ ಚೇತನ್ ಕಡೇಶಿವಾಲಯ, ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ನಾಗೇಶ್ ಕಲ್ಲಡ್ಕ, ಮಿಥುನ್ ಪೂಜಾರಿ ಕಲ್ಲಡ್ಕ, ಬರಿಮಾರು ದೇವಸ್ಥಾನದ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು ಸಹಿತ ಪ್ರಮುಖರು ಭಾಗವಹಿಸಿದ್ದರು. ತಿಲಕ್ ಕಡೇಶಿವಾಲಯ ಸ್ವಾಗತಿಸಿದರು. ದೀಕ್ಷಿತ್ ಕಡೇಶಿವಾಲಯ ವಂದಿಸಿದರು. ದುರ್ಗಾದಾಸ್ ಕಡೇಶಿವಾಲಯ ಕಾರ್ಯಕ್ರಮ ನಿರ್ವಹಿಸಿದರು. ಸುರೇಂದ್ರ ಸಜಿಪ ಪ್ರತಿಜ್ಞಾವಿಧಿ ಬೋಧಿಸಿದರು. ಕಿಶೋರ್ ಪೆರ್ಲ ವಂದೇ ಮಾತರಂ ಹಾಡಿದರು.ಮಾಣಿ, ವೀರಕಂಭಗಳಿಂದ ವಾಹನ ಜಾಥಾ ಆಗಮಿಸಿತು.



Be the first to comment on "ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ"