
ಕೇಂದ್ರ ಸರಕಾರದ ಒಂದು ದಶಕದ ಆಡಳಿತವು ದೇಶವನ್ನು ಕ್ರಮೇಣ ಆತಂಕ, ನಿರಾಶೆ ಮತ್ತು ಹೆಚ್ಚುತ್ತಿರುವ ಸಂಕಷ್ಟದತ್ತ ಕೊಂಡೊಯ್ದಿದೆ. ಇಂದು ದೇಶವನ್ನು ಸಾಮ್ರಾಜ್ಯಶಾಹಿಗಳಿಗೆ ಮಾರುವ ದೇಶೀಯ ಬ್ರಿಟೀಷರಿಂದ ದೇಶವನ್ನು ರಕ್ಷಿಸುವ ಅಗತ್ಯತೆ ಇದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್‍ಯದರ್ಶಿ ಸಾತಿ ಸಂದರೇಶ್ ಅಭಿಪ್ರಾಯಪಟ್ಟರು.

ಬಂಟ್ವಾಳದಲ್ಲಿ ಸಿಪಿಐ ರಾಷ್ಟ್ರವ್ಯಾಪಿ ರಾಜಕೀಯ ಅಭಿಯಾನದ ಭಾಗವಾಗಿ ಜರುಗಿದ ಪಾದಯಾತ್ರೆ ಕಾಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್, ಜಿಲ್ಲಾ ಸಹ ಕಾರ್‍ಯದರ್ಶಿ ವಿ.ಎಸ್.ಬೇರಿಂಜ ಮಾತನಾಡಿದರು. ಅಧ್ಯಕ್ಷತೆಯನ್ನು ಪಕ್ಷದ ಮಾಜಿ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್ ವಹಿಸಿದ್ದರು. ಪಕ್ಷದ ಜಿಲ್ಲಾ ಕಾರ್‍ಯಕಾರಿ ಸಮಿತಿ ಸದಸ್ಯ ಎಚ್.ವಿ ರಾವ್, ಪಕ್ಷದ ಮಂಗಳೂರು ತಾಲೂಕು ಕಾರ್‍ಯದರ್ಶೀ ಎಂ.ಕರುಣಾಕರ, ಜಿಲ್ಲಾ ಮಂಡಳಿ ಸದಸ್ಯರಾದ ಭಾರತಿ ಪ್ರಶಾಂತ್, ಗೀತಾ ಬಜಾಲ್ ಉಪಸ್ಥಿತರಿದ್ದರು. ನೇತೃತ್ವವನ್ನು ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಎಐವೈಎಫ್ ಮುಖಂಡ ಪುಷ್ಪರಾಜ್ ಬೋಳೂರು, ಸುಧಾಕರ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ಎನ್ ಎಫ್ ಐ ಡಬ್ಲ್ಯೂ ನಾಯಕಿ ಶಮಿತ, ಮಮತ, ಮೋಹಿನಿ, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಚಂದ್ರಾವತಿ ಕೆ. ಜಯಂತ, ಸರೋಜಿನಿ ಕುರಿಯಾಳ, ಎಐವೈಎಫ್ ಮುಖಂಡ ಶ್ರೀನಿವಾಸ ಭಂಡಾರಿ, ಪಕ್ಷದ ವಿಟ್ಲದ ಮುಖಂಡ ಒ ಕೃಷ್ಣ, ಮೋಹನ ಅರಳ ವಹಿಸಿದ್ದರು. ಬಂಟ್ವಾಳ ತಾಲೂಕ ಕಾರ್‍ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿದರು.


Be the first to comment on "BANTWAL: ಬಂಟ್ವಾಳದಲ್ಲಿ ಸಿಪಿಐ CPI ಪಾದಯಾತ್ರೆ"