ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ–ಸಹಾಯ ಸಂಘಗಳ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಂದಾಗಿ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ ಆರ್ಥಿಕ ಭದ್ರತೆಯೊಂದಿಗೆ ಬದುಕುವಂತಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಕಲ್ಲಡ್ಕ ಪೂರ್ಲಿಪಾಡಿ ಮರಾಠಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ 7 ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಾಗೂ ದಾಖಲಾತಿ ಹಸ್ತಾಂತರಿಸಿ ಮಾತನಾಡುತ್ತಿದ್ದರು.
ಮಹಿಳೆಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ: ರುಕ್ಮಯ ಪೂಜಾರಿ
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, “ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಗ್ರಾಮಾಭಿವೃದ್ಧಿ ಯೋಜನೆಯೇ ಪ್ರಮುಖ ಕಾರಣ,” ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, ಯೋಜನೆಯು ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.
ಸಾಧಕರಿಗೆ ಗೌರವಾರ್ಪಣೆ
ಯೋಜನೆಗೆ ವಿಶೇಷ ಬೆಂಬಲ ನೀಡುತ್ತಿರುವ ಶೇಖರ ಪೂಜಾರಿ ಕಾನೇಕೋಡಿ ಹಾಗೂ ಶಂಕರನಾರಾಯಣ ಐತಾಳ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಜೊತೆಗೆ ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ತಾಪಂ ಅಧ್ಯಕ್ಷ ಪದ್ಮನಾಭ ರೈ, ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಗಣೇಶ್ ಶೆಟ್ಟಿ ಗೋಳ್ತಮಜಲು, ಜಿಲ್ಲಾ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಜನಜಾಗೃತಿ ವೇದಿಕೆ ಅಧ್ಯಕ್ಷ ವೆಂಕಟರಾಯ ಪ್ರಭು, ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು.
ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರಾದ ಶಾಂಭವಿ ಆಚಾರ್ಯ, ದಯಾನಂದ ಗೌಡ, ಸೀತಾ ಆಚಾರ್ಯ, ಸೀತಾರಾಮ್ ಶೆಟ್ಟಿ, ಮಮತಾ, ಉಮಾವತಿ, ಮಮತಾ ಶೆಟ್ಟಿ ಹಾಗೂ ನೂತನ ಅಧ್ಯಕ್ಷರಾದ ಚಿದಾನಂದ ಸುವರ್ಣ, ಮಾಧವ ಸಾಲಿಯಾನ್, ಸುನಿಲ್ ನಾಯ್ಕ್, ವೀಣಾ, ಚಂದ್ರಾವತಿ, ಶಾಲಿನಿ, ನಾಗಪ್ಪ ಭಾಗವಹಿಸಿದ್ದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಕಾಂಪ್ರಬೈಲ್ ಹಾಗೂ ಬೃಂದಾವನ ಬಾಲ ಗೋಕುಲ ನೆಲ್ಲಿ ಶಂಭುಗ ತಂಡದವರಿಂದ ಭಜನಾ ಸಂಕೀರ್ತನೆ ಜರುಗಿತು. ಸಭಾ ಕಾರ್ಯಕ್ರಮದ ಬಳಿಕ ಸ್ವ-ಸಹಾಯ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಅಶ್ವಿನಿ ವರದಿ ವಾಚಿಸಿದರು. ಚಿದಾನಂದ ಸುವರ್ಣ ಅನಿಸಿಕೆ ಹಂಚಿಕೊಂಡರು. ಸೇವಾಪ್ರತಿನಿಧಿ ವಿದ್ಯಾ ಧನ್ಯವಾದ ಸಮರ್ಪಿಸಿದರು. ಸಂತೋಷ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಸ್ವಾವಲಂಬಿ ಜೀವನ ಸೃಷ್ಟಿಗೆ ಧರ್ಮಸ್ಥಳ ಯೋಜನೆ ಸಹಕಾರಿ: ಶಾಸಕ ರಾಜೇಶ್ ನಾಯ್ಕ್"