
ಬಂಟ್ವಾಳ: ಬಾಳ್ತಿಲ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಶುಕ್ರವಾರ ದೃಢಸಂಪ್ರೋಕ್ಷಣಾ ಪೂಜೆ ಕೇಶವ ಶಾಂತಿ ಮೂಲಕ ನೆರವೇರಿಸಲಾಯಿತು. ಮಹಾಪೂಜೆಯ ನಂತರ ಅವಲೋಕನ ಸಭೆ ನಡೆಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರಕ್ಕಾಗಿ ಸ್ವಯಂಸೇವಕರಾಗಿ ಹಗಲಿರುಳು ಸೇವೆಗೈದ ಜೀರ್ಣೋದ್ಧಾರ ಸಮಿತಿಯ ಎಲ್ಲ ಹಿರಿಯ ಕಿರಿಯ ಕಾರ್ಯಕರ್ತ ಬಂಧುಗಳಿಗೆ, ಭಾಗವಹಿಸಿದ ಸಂಘ ಸಂಸ್ಥೆಗಳಿಗೆ, ಮಂದಿರ ರಚನೆಗೊಳ್ಳಲು ಸಹಕರಿಸಿದ ಊರ ಪರವೂರ ದಾನಿಗಳನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಆರ್. ಚೆನ್ನಪ್ಪ ಕೋಟ್ಯಾನ್, ನಾರಾಯಣ ಪೂಜಾರಿ ನಿಡ್ಯೆ, ಕಾರ್ಯದರ್ಶಿ ಮೋಹನ್ ಪಿ ಎಸ್, ಟ್ರಸ್ಟಿಗಳಾದ ಶರತ್ ಕುಮಾರ್, ಜಯರಾಮ ಕಲ್ಲಪಾಪು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶಿವರಾಜ್ ಕಾಂದಿಲ, ಸುಭಾಷ್ ದಾಸಕೋಡಿ, ಕ್ರಷ್ಣಪ್ಪ ಜಿ. ಸಾಲಿಯಾನ್, ಮೀನಾಕ್ಷಿ ಆರ್ ಪೂಜಾರಿ, ಯಶೋಧಾ ನಿಡ್ಯೆ, ಮಲ್ಲಿಕಾ ಸೇನೆರೆಕೋಡಿ, ಕುಮಾರ ಕಾಂದಿಲ, ಅಶೋಕ್ ಕುಮಾರ್, ತಾರಾನಾಥ ಗಣೇಶ್ನಗರ, ರಮೇಶ್ ಅನಂತಾಡಿ ಹಾಗೂ ಊರ ಪರವೂರಿನ ನಾರಾಯಣಗುರು ಭಕ್ತರು ಭಾಗವಹಿಸಿದ್ದರು.


Be the first to comment on "ಬಾಳ್ತಿಲ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ದೃಢಸಂಪ್ರೋಕ್ಷಣಾ ಪೂಜೆ"