ಬಂಟ್ವಾಳ: ಮರಹೂಮ್ ಅಬ್ದುಲ್ ರಹಿಮಾನ್ ಕೋಲತ ಮಹಲ್ ಹಾಗೂ ಅಮೀರ್ ಅರ್ಶದಿ ಸಜಿಪ ಸ್ಮರಣಾರ್ಥವಾಗಿ ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕ ಮತ್ತು ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಬ್ಲಡ್ ಡೋನರ್ಸ್ ದಕ್ಷಿಣ ಕನ್ನಡ ಸಂಯುಕ್ತ ಆಶ್ರಯದಲ್ಲಿ ಅಲಾಡಿಯ ನೂರುಲ್ ಹುದಾ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಒಟ್ಟು 79 ಯೂನಿಟ್ ರಕ್ತ ಸಂಗ್ರಹವಾಯಿತು. ಈ ರಕ್ತವು ಅಗತ್ಯವಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.
ಬದ್ರಿಯಾ ಜುಮಾ ಮಸೀದಿ, ಅಲಾಡಿಯ ಖತೀಬ್ ಉಸ್ತಾದ್ ಅಬ್ದುಲ್ ರಝಾಕ್ ಫೈಝಿ ಉದ್ಘಾಟಿಸಿದರು. ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕದ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಸ್ವಾಗತಿಸಿ, ರಕ್ತದಾನದ ಮಹತ್ವ ಹಾಗೂ ಮಾನವೀಯ ಸೇವೆಯ ಅಗತ್ಯವನ್ನು ವಿವರಿಸಿದರು.
VNR GOLD
ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಉಸ್ತುವಾರಿ ಅಧಿಕಾರಿ ಆಂಟನಿ ಹಾಗೂ ವೈದ್ಯೆ ಡಾ. ವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕದ ಕಾರ್ಯದರ್ಶಿ ಸಫೀರ್ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಎಸ್.ಕೆ.ಎಸ್.ಎಸ್.ಎಫ್. ಆಲಾಡಿ ಶಾಖೆಯಿಂದ ರಕ್ತದಾನ ಶಿಬಿರ, 79 ಯೂನಿಟ್ ರಕ್ತ ಸಂಗ್ರಹ"
Be the first to comment on "ಎಸ್.ಕೆ.ಎಸ್.ಎಸ್.ಎಫ್. ಆಲಾಡಿ ಶಾಖೆಯಿಂದ ರಕ್ತದಾನ ಶಿಬಿರ, 79 ಯೂನಿಟ್ ರಕ್ತ ಸಂಗ್ರಹ"