
ಲೊರೆಟ್ಟೊಮಾತಾ ಚರ್ಚ್ ನ ನೂತನ ಧರ್ಮಗುರುಗಳಾಗಿ ವಂ. ಜೇಮ್ಸ್ ಡಿಸೋಜ ತಮ್ಮ ಸೇವಾಸ್ಥಾನದ ಅಧಿಕಾರ ವಹಿಸಿಕೊಂಡರು.

36 ವರ್ಷಗಳ ಸುದೀರ್ಘ ಅನುಭವ ಇರುವ ಧರ್ಮಗುರುಗಳು ವೇಣೂರು, ಬೆಳ್ತಂಗಡಿ, ವೆಲೆನ್ಸಿಯಾ, ವಾಮಂಜೂರು ಹೀಗೆ ಏಳನೇ ಚರ್ಚ್ ಆಗಿ ಲೊರೆಟ್ಟೊ ಮಾತಾ ದೇವಾಲಯದ 15ನೆಯ ಧರ್ಮ ಗುರುಗಳಾಗಿ ಅಧಿಕಾರ ವಹಿಸಿದರು.

ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ವಂ .ಜೇಸನ್ ಮೊನಿಸ್, ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಆಲ್ವಿನ್ ಪಿಂಟೊ, ಸರ್ವ ಆಯೋಗಗಳ ಸಂಯೋಜಕರಾದ ಸಚಿನ್ ನೊರೊನ್ಹಾ, ನಿರ್ಮಲ ಕಾನ್ವೆಂಟ್ ನ ಸೂಪರಿಯರ್ ಭಗಿನಿ ಇಡೊಲಿನ್ ರೊಡ್ರಿಗಸ್, ನೂತನ ಧರ್ಮಗುರುಗಳನ್ನು ಚರ್ಚ್ ದ್ವಾರದ ಬಳಿ ಚರ್ಚ್ ವ್ಯಾಪ್ತಿಯ ಭಕ್ತಾದಿಗಳ ಪರವಾಗಿ ಹೂವಿನ ಹಾರ ಹಾಕಿ ಅತ್ಮೀಯವಾಗಿ ಸ್ವಾಗತಿಸಿದರು. ಧರ್ಮಾಅಧ್ಯಕ್ಷರ ಪ್ರತಿನಿಧಿಯಾಗಿ ಬಂಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ವಿಕ್ಟರ್ ಡಿಸೋಜ ಸೇವಾಸ್ಥಾನದ ಪ್ರಾರ್ಥನಾ ಮಿತಿಯನ್ನು ನೆರವೇರಿಸಿದರು. ಮಂಗಳೂರು ಧರ್ಮ ಪ್ರಾಂತ್ಯದ ವಿವಿಧ ಚರ್ಚ್ ಗಳ ಧರ್ಮಗುರುಗಳು, ಭಗಿನಿಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕಳೆದ 6 ವರ್ಷಗಳಲ್ಲಿ ಚರ್ಚ್‌ನ ಅಧ್ಯಾತ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನಿಸ್ವಾರ್ಥಿ ಸೇವೆ ಸಲ್ಲಿಸಿದ ವಂ. ಫ್ರಾನ್ಸಿಸ್ ಕ್ರಾಸ್ತಾ ರವರು ಮೇ22ರಂದು ಕಾಸರಗೋಡು ವಲಯದ ವರ್ಕಾಡಿ ಸೆಕ್ರೆಡ್ ಹಾರ್ಟ್ ಚರ್ಚ್ ಗೆ ವರ್ಗಾವಣೆಗೊಂಡರು ಭಕ್ತಾದಿಗಳು ತುಂಬಿದ ಹೃದಯದಿಂದ ಭಾವಾನಾತ್ಮಕವಾಗಿ ಅವರನ್ನು ಬಿಳ್ಕೊಟ್ಟರು


Be the first to comment on "ಲೊರೆಟ್ಟೊ ಚರ್ಚ್ ಧರ್ಮಗುರುಗಳಾಗಿ ವಂ.ಜೇಮ್ಸ್ ಡಿಸೋಜ ಅಧಿಕಾರ ಸ್ವೀಕಾರ"