ಬಂಟ್ವಾಳ: ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಎಪ್ರಿಲ್ 26 ರಿಂದ ಮೇ 02 ರ ತನಕ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು ತಿಳಿಸಿದ್ದಾರೆ .

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವಿವರ ನೀಡಿದರು .
26ರಂದು 3 ಗಂಟೆಗೆ ಸಿದ್ದಕಟ್ಟೆ ನಲ್ಲೂರಂಗಡಿ ಬಸದಿಯಿಂದ ಹಸಿರು ಹೊರೆಕಾಣಿಕೆ ನಡೆಯಲಿದೆ. ಸುಬ್ರಹ್ಮಣ್ಯದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಾದ ದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಭಾಕರ ಐಗಳ್ ಮತ್ತು ಸಿದ್ದಕಟ್ಟೆಯ ವೈದ್ಯರಾದ ಡಾI ಪ್ರಭಾಚಂದ್ರ ಜೈನ್ ಚಾಲನೆ ನೀಡುವರು.

ಸಂಜೆ ಗಂಟೆ 6 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ . ದಿನಾಂಕ 27 ಮತ್ತು 28 ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

29ರಂದು ಬೆಳಿಗ್ಗೆ ಗಂಟೆ 10.27 ಕ್ಕೆ ಮಿಥುನ ಲಗ್ನದಲ್ಲಿ ಪಂಚಲೋಹದ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ಮಧ್ಯಾಹ್ನ 3 ಗಂಟೆಗೆ ಪೇಜಾವರ ಶ್ರೀಗಳ ಆಶೀರ್ವಚನ ಇರಲಿದೆ. 30ರಂದು ಸಂಜೆ 4.30ರಿಂದ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇವರ ನೇತೃತ್ವದ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಸಂಗಮೋತ್ಸವ“ ವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಬೆಳಾಲು ಇಲ್ಲಿನ ಧರ್ಮದರ್ಶಿ ಹರೀಶ್ ಅರಿಕೋಡಿ ಚಾಲನೆ ನೀಡಲಿದ್ದಾರೆ .ಮೇ 1ರಂದು ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮ ಕಲಶಾಭಿಷೇಕ ನಡೆಯುವುದು. 2ರಂದು ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ನಡೆಯುವುದು
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಪ್ರಭು ,ದುರ್ಗಾದಾಸ್ ಶೆಟ್ಟಿ ಕರೆಂಕಿಜೆ , ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಕುಕ್ಕೇಡಿ ,ಗುರಿಕಾರರಾದ ಗೋಪಾಲ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೇಮಚಂದ್ರ ಗೌಡ ಸಿದ್ದಕಟ್ಟೆ ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಮಂಚಕಲ್ಲು ಉಪಸ್ಥಿತರಿದ್ದರು


Be the first to comment on "ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನ: ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ – ವಿವರ ಇಲ್ಲಿದೆ"