

ದಕ್ಷಿಣ ಕನ್ನಡ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಎದುರಿಸುತ್ತಿರುವ ಗಂಭೀರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಮೋಟಾರ್ ಮತ್ತು ಜನರಲ್ ಮಜ್ದೂರು ಸಂಘ (ಬಿಎಂಎಸ್) ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಂಟ್ವಾಳದ ವಸಂತ ಕುಮಾರ್ ಮಣಿಹಳ್ಳ ವಹಿಸಿದ್ದರು. ರಿಕ್ಷಾ ಚಾಲಕರು ಎದುರಿಸುತ್ತಿರುವ ದಿನನಿತ್ಯದ ಸಂಕಷ್ಟಗಳು, ಆದಾಯ-ಖರ್ಚಿನ ಅಸಮತೋಲನ, ಗ್ಯಾಸ್ ಅಭಾವದಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ಬಾಡಿಗೆ ದರ ಪರಿಷ್ಕರಣೆಯ ಅಗತ್ಯತೆಯನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಯಿತು. ಡಿಸಿ ದರ್ಶನ್ ಎಚ್ ವಿ ಅವರು ಮನವಿಗೆ ಸ್ಪಂದಿಸಿ, ಒಂದು ವಾರದ ಒಳಗಾಗಿ ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಉಪಾಧ್ಯಕ್ಷರಾದ ರೋಹಿತಾಶ್ವ, ನಾರಾಯಣ ಪೂಜಾರಿ, ಜಿಲ್ಲೆಯ ಆಯಾಯ ತಾಲೂಕಿನ ಪದಾಧಿಕಾರಿಗಳಾದ ಹೇಮಂತ್ (ಪುತ್ತೂರು), ಸಚಿನ್ (ಪುತ್ತೂರು), ಸೀತಾರಾಮ್ (ಪುತ್ತೂರು), ಪ್ರಕಾಶ್ (ಸುಳ್ಯ), ರವಿ (ಸುಳ್ಯ), ಕರುಣಾಕರ ಗೌಡ (ಸುಳ್ಯ), ಶ್ರೀಕಾಂತ್ (ಬಂಟ್ವಾಳ), ಪರಮೇಶ್ವರ್, ನವೀನ್ (ಬಂಟ್ವಾಳ), ಸತೀಶ್ (ಬಂಟ್ವಾಳ), ದಿನೇಶ್ (ಬಂಟ್ವಾಳ), ಸುರೇಶ್ (ಬಂಟ್ವಾಳ) ಹಾಗೂ ವಿವಿಧ ತಾಲೂಕು ರಿಕ್ಷಾ ಯೂನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Be the first to comment on "ಆಟೊರಿಕ್ಷಾ ಬಾಡಿಗೆ ದರ ಪರಿಷ್ಕರಣೆ, ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ"