ಶ್ರೀ ಕ್ಷೇತ್ರ ಪದ್ಯಾಣದಲ್ಲಿ ಮಾ.30ರಂದ ನಡೆಯುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ, ಪದ್ಯಾಣಕ್ಕೆ ಏಕಾದಶ ಕಲಶ ತೀರ್ಥಗಳು ಹಾಗೂ ಹಸಿರುವಾಣಿಯ ಭವ್ಯ ಮೆರವಣಿಗೆ ನಡೆಯಲಿದ್ದು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಸಭೆ ನಡೆಯಿತು.

ಉಪ್ಪಿನಂಗಡಿಯಲ್ಲಿ ರಥ ಚಾಲನಾ ಸಮಿತಿ ರಚನೆ ಮಾಡಿದ್ದು, ಸಮಿತಿ ಅಧ್ಯಕ್ಷರಾಗಿ ಉಪ್ಪಿನಂಗಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ್, ಸಂಚಾಲಕರಾಗಿ ಸುದರ್ಶನ್ ಉಪ್ಪಿನಂಗಡಿ, ಸಂಯೋಜಕರಾಗಿ ಮಹೇಶ್ ಬಜತ್ತೂರು ಹಾಗೂ ಭಜನಾ ಸಂಕೀರ್ತನೆಗಳ ಸಂಯೋಜಕರಾಗಿ ಉಷಾ ಮುಳಿಯ, ಗೀತಾ ಯತೀಶ್ ಬಂಗೇರಾ, ಕಸ್ತೂರಿ ಶಾಂತಪ್ಪ ಹಿರೇಬಂಡಾಡಿ, ಲೋಕೇಶ್ ಬೆತ್ತೋಡಿ, ರಾಜಶೇಖರ್ ಹಾಗೂ ಕಲಶ ಸಂಯೋಜಕರಾಗಿ ರವಿ ಇಳಂತಿಲ, ಸುನಿಲ್ ದಡ್ಡು ಹಾಗೂ ವ್ಯವಸ್ಥಾ ಸಮಿತಿ ಸಂಯೋಜಕರಾಗಿ ಸುರೇಶ್ ಅತ್ರಮಜಲ್, ಕಿಶೋರ್ ಉಪ್ಪಿನಂಗಡಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಾರ್ಯಾಧ್ಯಕ್ಷ ಶ್ಯಾಮ ಸುದರ್ಶನ ಹೊಸಮೂಲೆ, ಪ್ರಮುಖರಾದ ನರಸಿಂಹ ಮಾಣಿ, ಜಯಂತ್ ಪುರೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Be the first to comment on "ಪದ್ಯಾಣ ಬ್ರಹ್ಮಕಲಶೋತ್ಸವ ಹಿನ್ನೆಲೆ ಏಕಾದಶ ಕಲಶ ತೀರ್ಥಗಳ ಹಸಿರುವಾಣಿ ಭವ್ಯ ಮೆರವಣಿಗೆ: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಸಭೆ"