ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿರುವ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಹುಲಿಮೇರು ಅಧ್ಯಕ್ಷತೆಯಲ್ಲಿ ದಾನಿಗಳಿಂದ ಕೊಡಲಾದ ನಾನಾ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ವೇಳೆ ದಾನಿಗಳನ್ನು ಗೌರವಿಸಲಾಯಿತು.
ಇ.ಡಿ.ಆರ್.ಟಿ. ಸಂಸ್ಥೆಯಿಂದ ಮೀನಾಕ್ಷಿ ಮತ್ತು ಹರೀಶ್ ಆಚಾರ್ಯ ನೇತೃತ್ವದಲ್ಲಿ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ ಮತ್ತು ಕ್ರೀಡಾ ಸಾಮಗ್ರಿ, ಎಸ್. ಮಹಮ್ಮದ್, ಅವರಿಂದ ಟ್ರ್ಯಾಕ್ ಸೂಟ್, ಮನೋಜ್ ಐತೇರಿ, ಅವರಿಂದ ಉಚಿತ ನೋಟ್ ಪುಸ್ತಕ, ನರೇಶ್ ಪೂಜಾರಿ ಅವರಿಂದ ಉಚಿತ ನೋಟ್ ಪುಸ್ತಕ, ಗ್ರಾಪಂ ಸದಸ್ಯೆ ವಿಜಯ ಕುಂಜಾಡಿ ಅವರಿಂದ ಹೊಸದಾಗಿ ದಾಖಲಾದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕ, ಅಲ್ವಿನ್ ಡಿಸೋಜಾ ಅವರಿಂದ ಛತ್ರಿ, ಕಿರಣ್ ಮಂಜಿಲ ಅವರಿಂದ ಗೌರವ ಶಿಕ್ಷಕರ ವೇತನ, ರಾಘವೇಂದ್ರ ಭಟ್ ಅವರಿಂದ ಎರಡು ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.
ದಾನಿಗಳನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಸಂತೋಷ್ ಮಂಜಲ, ನಿತೇಶ್, ಶಾಲಾ ಎಸ್. ಡಿ. ಎಂ. ಸಿ. ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರ ಸ್ವಾಗತಿಸಿ ಶ್ರೀಮತಿ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಮೆಟಿಲ್ಡಾ ಮತ್ತು ಸಿಲ್ವಿಯ ಮಿರಾಂದ, ಕುಮಾರಿ ಸುತೀಕ್ಷ ದಾನಿಗಳ ಬಗ್ಗೆ ತಿಳಿಸಿದರು.
Be the first to comment on "Bantwal: ಹೊಕ್ಕಾಡಿಗೋಳಿ: ವಿದ್ಯಾರ್ಥಿಗಳಿಗೆ ನಾನಾ ಕೊಡುಗೆ ವಿತರಣೆ"