ಯುವವಾಹಿನಿ ಬಂಟ್ವಾಳ ಘಟಕದ. 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.ನರಿಕೊಂಬು,ಶ್ರೀ ನಾಲ್ಕೆತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಸಮಾರಂಭ ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಸಭೆಯ ಅಧ್ಯಕ್ಷತೆ ವಹಿಸಿ ತನ್ನ ಅವಧಿಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೊಧಿಸಿ, ಶುಭ ಹಾರೈಸಿದರು.’ಯುವ ಸಂಚಯ’ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಲಾಯಿತು. ಸಂಪಾದಕ ರಾಜೇಶ್ ಸುವರ್ಣ ವಿಶೇಷಾಂಕದ ಕುರಿತು ಮಾಹಿತಿ ನೀಡಿದರು. ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಚೇತನ್ ಮುಂಡಾಜೆ ವರದಿ ಮಂಡಿಸಿದರು. ನೂತನ ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಮಧುಸೂಧನ ಮಧ್ವ ಹಾಗೂ ತಂಡದ ಪದಗ್ರಹಣ ನಡೆಯಿತು. ಆಯ್ಕೆ ಸಮಿತಿಯ ಹರೀಶ್ ಕೋಟ್ಯಾನ್ ಕುದನೆ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಉಮೇಶ್ ಬಾಯಾರು ಉಪಸ್ಥಿತರಿದ್ದರು. ಕೋಶಾಧಿಕಾರಿ ಗೀತಾ ಜಗದೀಶ್ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ಪ್ರೇಮನಾಥ ಕೆ. ಪ್ರಸ್ತಾವಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಮೊದಲು ಅಜಿಲಮೊಗಲು ಅಡ್ಯಾಲು ಯಕ್ಷಚಿಗುರು ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಯುವವಾಹಿನಿ ಬಂಟ್ವಾಳ ಘಟಕವು ಕವಿ, ಸಾಹಿತಿ, ಸಂಘಟಕ ಬಿ.ತಮ್ಮಯ್ಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಿದ್ದು ಅದರ ಬಹುಮಾನ ವಿತರಣೆ ನಡೆಯಿತು…’ಅತೀ ಸಣ್ಣಕಥೆ’ ಸ್ಪರ್ಧೆಯಲ್ಲಿ ಸುಲ್ತಾನ್ ಮಾನ್ಸೂರು ಪ್ರಥಮ, ಸ್ಮಿತಾ ಅಮೃತರಾಜ್ ಸಂಪಾಜೆ ದ್ವಿತೀಯ ಬಹುಮಾನವನ್ನು ಪಡೆದರು. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಪ್ರಥಮ ನಳಿನಿ ಭೀಮಪ್ಪ ದಾರವಾಡ ದ್ವಿತೀಯ ಬಹುಮಾನವನ್ನು ಪಡೆದರು.
The YUVAVAHINI Bantwal unit’s new executive committee swearing-in ceremony for the year 2025-26 was held at the B.C. Road Brahmasri Narayanaguru Hall.
Be the first to comment on "Bantwal: ಯುವವಾಹಿನಿ ಬಂಟ್ವಾಳ ಘಟಕ ಪದಗ್ರಹಣ ಸಮಾರಂಭ"