ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕೈಕಂಬ ಕಚೇರಿಯ ಮುಂಭಾಗದಲ್ಲಿ ಸಾಹುಲ್ ಹಮೀದ್ ಎಸ್ ಎಚ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಧ್ವಜಾರೋಹಣವನ್ನು ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷೆ ಶಾಹಿದಾ ತಸ್ನೀಂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕೋಶಾಧಿಕಾರಿ ರಹೀಂ ಇಂಜಿನಿಯರ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಇಝಾನ್, ಕೋಶಾಧಿಕಾರಿ ಯಾಸಿರ್ ಕಲ್ಲಡ್ಕ, ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಬಂಟ್ವಾಳ ಪುರಸಭಾ ಸದಸ್ಯ ಇದ್ರೀಸ್ ಪಿ ಜೆ, ಎಸ್ ಡಿ ಪಿ ಐ ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ, ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು, ವಿಮ್ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ಕ್ಷೇತ್ರದಾದ್ಯಂತ ಕಾವಳಕಟ್ಟೆ, ಬಾಂಬಿಲ, ಪಾಂಡವರಕಲ್ಲು, ಕಲ್ಲಡ್ಕ, ಬಲ್ಲೆಕೋಡಿ, ಕೆ.ಸಿ.ರೋಡ್, ಬುಡೋಳಿ, ನಂದಾವರ, ಆಲಂಪಾಡಿ, ಪರ್ತಿಪ್ಪಾಡಿ, ಕಡಂಬು, ಕರೋಪಾಡಿ, ಕುಕ್ಕಾಜೆ, ಬೊಳಂತೂರು, ತಾಳಿತ್ತನೂಜಿ, ಸಾಲೆತ್ತೂರು, ಕಲಾಯಿ, ತಲಪಾಡಿ, ಕುಮೇರು, ಶಾಂತಿಯಂಗಡಿ, ಪರ್ಲಿಯಾ, ಮದ್ದ, ಬಂಟ್ವಾಳ, ಅಕ್ಕರಂಗಡಿ, ರೆಂಗೇಲು, ಲೋರೆಟ್ಟೋಪದವು, ಗೂಡಿನಬಳಿ, ಆಲಡ್ಕ ಹಾಗೂ ಪಲ್ಲಮಜಲು ಪ್ರದೇಶದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಇರ್ಫಾನ್ ಕಾವಳಕಟ್ಟೆ ಸ್ವಾಗತಿಸಿ, ಪುರಸಭಾ ಸಮಿತಿ ಕಾರ್ಯದರ್ಶಿ ಮುಬಾರಕ್ ಗೂಡಿನಬಳಿ ವಂದಿಸಿದರು.
Be the first to comment on "ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ"