ಕಳೆದ ಮೂರು ದಿನಗಳಿಂದ ದಿನರಾತ್ರಿ ಎನ್ನದೆ, ಮಳೆ ಸುರಿಯುತ್ತಿರುವ ಕಾರಣ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದೆ.ಇದರ ಪರಿಣಾಮ ಬಂಟ್ವಾಳ ತಾಲೂಕಿನ ಹಲವು ರಸ್ತೆಗಳು ತನ್ನ ನಿಜರೂಪ ಪ್ರದರ್ಶಿಸಿವೆ. ಪ್ರಮುಖ ನಗರಗಳನ್ನು ಹಾದುಹೋಗುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಸ್ಥಿತಿ ಹದಗೆಟ್ಟಿದೆ.

PHOTO: VARUN KALLADKA
ಅದರಲ್ಲೂ ಬೋಳಂಗಡಿಯಿಂದ ಕಲ್ಲಡ್ಕದವರೆಗಿನ ರಸ್ತೆ ಪರಿಸ್ಥಿತಿ ಕೇಳುವುದೇ ಬೇಡ. ಹಾಕಿದ ಡಾಂಬರು ಕರಗಿದೆ. ಹೊಂಡಗಳು ಎದ್ದು ಕಾಣಿಸುತ್ತಿವೆ. ಸರ್ವೀಸ್ ರಸ್ತೆ ಮಾಯವಾಗಿದೆ. ಎದ್ದುಬಿದ್ದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

PHOTO: VARUN KALLADKA
ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಬೋಳಂಗಡಿಯಿಂದ ನರಹರಿ ಪರ್ವತದ ಭಾಗ ಹಾಗೂ ಅಲ್ಲಿಂದ ಸ್ವಲ್ಪ ಮುಂದೆ ಫ್ಲೈಓವರ್ ಆರಂಭವಾಗುವ ಜಾಗದವರೆಗೆ ರಸ್ತೆ ಕೆಸರುಮಯವಾಗಿದ್ದು ಹೊಂಡಗಳಿಂದ ಕೂಡಿದೆ. ವಾಹನಗಳು ಆ ಭಾಗದಲ್ಲಿ ಓವರ್ ಟೇಕ್ ಮಾಡಬಾರದು ಎಂದಿದ್ದರೂ ಕೆಲವೊಂದು ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸುವ ಕಾರಣ ವಾಹನದಟ್ಟಣೆಯಾಗುತ್ತಿದೆ. ಇನ್ನು ಮುಂದೆ ಸಾಗಿದರೆ, ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆ ಸುಮಾರು ಐನೂರು ಮೀಟರ್ ನಷ್ಟು ಸಂಪೂರ್ಣ ಹಾಳಾಗಿ, ಹೊಂಡಗುಂಡಿಗಳಿಂದ ಕೂಡಿದೆ.

PHOTO: VARUN KALLADKA
ಮೇಲ್ನೋಟಕ್ಕೆ ಪೂರ್ಣಗೊಂಡಂತೆ ಕಂಡರೂ ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ನಲ್ಲಿ ಸುರಕ್ಷಿತವಾಗಿ ಓಡಾಡಬೇಕು ಎಂದಿದ್ದರೆ, ಇನ್ನಷ್ಟು ಕೆಲಗಳು ಪೂರ್ಣಗೊಳ್ಳಬೇಕು. ನಿರ್ಮಾಣ ಕಂಪನಿಯ ಇಂಜಿನಿಯರುಗಳು ಹೇಳುವ ಪ್ರಕಾರ, ಒಂದು ಪಾರ್ಶ್ವದಲ್ಲಿ ವಾಹನಗಳನ್ನು ಪ್ರಾಯೋಗಿಕವಾಗಿ ಸಂಚಾರಕ್ಕೆ ಕೆಲ ದಿನಗಳಲ್ಲಿ ಬಿಡುವ ಸಾಧ್ಯತೆ ಇದೆ. ಕಲ್ಲಡ್ಕದಲ್ಲಿ ವಾಹನದಟ್ಟಣೆ ಉಂಟಾಗುವುದು ಸಾಮಾನ್ಯ ಎಂಬಂತಾಗಿದೆ.
Be the first to comment on "NHAI – ಕೆಸರಾಯಿತು ಹೆದ್ದಾರಿ, ಈಗ ಕಲ್ಲಡ್ಕದ ಕಾಂಕ್ರೀಟ್ ರಸ್ತೆಯಲ್ಲೂ ಕೆಸರು"