:ಅರುಣ್ ಕುಮಾರ್ ಬೋರು ಗುಡ್ಡೆ ತನ್ನ ಸರ್ವಸ್ವವನ್ನು ಸಮಾಜ ಸೇವೆಗಾಗಿ ಅರ್ಪಿಸಿದವರು. ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಹೇಳಿದರು.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನರಿಕೊಂಬು ಗ್ರಾ.ಪಂ.ಸದಸ್ಯ ಮತ್ತು ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ನಿರ್ದೇಶಕರಾದ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ಅವರಿಗೆ ಪಾಣೆಮಂಗಳೂರಿನ ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ:ಭಾರತೀಯ ಜನತಾ ಪಾರ್ಟಿ, ನರಿಕೊಂಬು, ಓಂ ಶ್ರೀ ಗೆಳೆಯರ ಬಳಗ (ರಿ.), ನ್ಯಾಲ ನರಿಕೊಂಬು, ಶ್ರೀ ದೇವಿ ಯುವಕ ಮಂಡಲ, ನ್ಯಾಲ ಕಾಪಿಕಾಡು,ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.), ನರಿಕೊಂಬು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸೇವಾ ಸಮಿತಿ, ನ್ಯಾಲ-ಮರ್ದೋಳಿ-ಕಾಪಿಕಾಡು ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು .
ಈ ಸಂದರ್ಭ ಬಿಜೆಪಿ ಪಕ್ಷದ ಪ್ರಮುಖರಾದ ಡೊಂಬಯ್ಯ ಅರಳ, ದೇವಪ್ಪ ಪೂಜಾರಿ ಬಾಳಿಕೆ, ದಿನೇಶ್ ಅಮ್ಟೂರು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಯಶೋಧರ ಕರ್ಬೆಟ್ಟು, ಪ್ರಮುಖರಾದ ಮಯ್ಯೂರು ಉಲ್ಲಾಳ್, ಸುರೇಶ ಕುಲಾಲ್, ಅನಿಲ್ ದಾಸ್, ಸುಂದರ್ ಕುಲಾಲ್, ಪ್ರೇಮನಾಥ್ ಶೆಟ್ಟಿ ಅಂತರ, ರವಿ ಅಂಚನ್, ನುಡಿ ನಮನ ಸಲ್ಲಿಸಿದರು. ಈ ಸಂದರ್ಭ ಅರುಣ್ ಬೋರ್ ಗುಡ್ಡೆಯವರ ಶಾಶ್ವತ ನೆನಪಿಗಾಗಿ ನಾಯಿಲ ಪರಿಸರದ ಒಂದು ರಸ್ತೆಗೆ ಅವರ ಹೆಸರನ್ನು ಇಡಬೇಕೆಂದು ಸೇರಿದ ಸರ್ವರು ಅಭಿಪ್ರಾಯಪಟ್ಟರು. ನವೀನ್ ಕುಲಾಲ್ ಪುತ್ತೂರು ಪ್ರಸ್ತಾವನೆ ಮಾಡಿ,ಕಿರಣ್ ಅಟ್ಲೂರು ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು
Be the first to comment on "ಸಮಾಜಸೇವೆಗೆ ಸರ್ವಸ್ವವನ್ನು ಮುಡಿಪಾಗಿಟ್ಟವರು ಅರುಣ್ ಬೋರುಗುಡ್ಡೆ: ಆರ್. ಚೆನ್ನಪ್ಪ ಕೋಟ್ಯಾನ್"