ಬಂಟರ ಸಂಘ ಬಂಟವಾಳ ತಾಲೂಕು ವಿಂಶತಿ ಸಂಭ್ರಮ ಮೇ 24 ಮತ್ತು 25ರಂದು ನಡೆಯಲಿದೆ ಎಂದು ವಿಂಶತಿ ಸಂಭ್ರಮದ ಅಧ್ಯಕ್ಷರೂ ಆಗಿರುವ ಬಂಟರ ಸಂಘ ಬಂಟವಾಳ ತಾಲೂಕು ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮೇ .24ರಂದು ಸಂಜೆ 5 ಗಂಟೆಗೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಂಟ್ವಾಳ ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ ವಹಿಸುವರು. ಇದಕ್ಕೂ ಮುನ್ನ ಮಧ್ಯಾಹ್ನ 2 ಗಂಟೆಯಿಂದ ಬಂಟ್ವಾಳ ತಾಲೂಕು ವಲಯ ಬಂಟರ ಸಂಘಗಳ ನೃತ್ಯಸ್ಪರ್ಧೆ ನಡೆಯಲಿದೆ. ಉದ್ಯಮಿ ಸಹಜ್ ರೈ ಉದ್ಘಾಟಿಸುವರು ಎಂದರು. ಸಂಜೆ 7ರಿಂದ ಮಹಿಳಾ ವಿಭಾಗದಿಂದ ತುಳುನಾಡ ಪರ್ಬೊದ ಪೊರ್ಲು, ತಿರ್ಲ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮ, 8ರಿಂದ ತಾಲೂಕು ಬಂಟ ಕಲಾವಿದರಿಂದ ತುಳು ಜನಪದ ನಾಟಕ ಕೋರ್ದಬ್ಬು ತನ್ನಿಮಾನಿಗ ಪ್ರದರ್ಶನಗೊಳ್ಳಲಿದೆ.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ:
25ರಂದು ಭಾನುವಾರ ಬೆಳಗ್ಗೆ 9.30ರಿಂದ 10.30ರವರೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನವನ್ನು ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ನೀಡಲಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನವನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ ನೀಡುವರು. ಔದ್ಯೋಗಿಕ ಮಾರ್ಗದರ್ಶನವನ್ನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಡ್ಯಾರ್ ಗಾರ್ಡನ್ ಮಾಲೀಕ ಕಿಶನ್ ಶೆಟ್ಟಿ ನೀಡುವರು. ಸಾಮಾಜಿಕ ಉಪನ್ಯಾಸವನ್ನು ಎಡ್ತೂರು ರಾಜೀವ ಶೆಟ್ಟಿ ಅವರು ಮಾಡಲಿದ್ದಾರೆ.
ವಿಂಶತಿ ಗೌರವ:
ಮೇ 25ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ಡಾ.ವಿನಯ್ ಹೆಗ್ಡೆ, ಡಾ. ಎ.ಜೆ.ಶೆಟ್ಟಿ, ಡಾ. ಎ.ಸದಾನಂದ ಶೆಟ್ಟಿ, ಡಾ. ಪ್ರಕಾಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಅವರಿಗೆ ವಿಂಶತಿ ಗೌರವ ನೀಡಿ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರಾದ ಬಿ.ರಮಾನಾಥ ರೈ, ಜ.ರಾಜೇಶ್ ರೈ ಕಲ್ಲಂಗಳ, ಡಾ. ಸತೀಶ್ ಭಂಡಾರಿ ಬಾವಬೀಡು, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಕ.ಜಗಜೀವನ್ ಭಂಡಾರಿ ಅಗರಿ, ವಿಠಲ ರೈ ಬಾಲಾಜಿಬಲು, ಶೀನ ಶೆಟ್ಟಿ ವೀರಕಂಭ, ರವಿ ಶೆಟ್ಟಿ ದೋಣಿಂಜೆಗುತ್ತು, ಸರಸ್ವತಿ ಬಿ.ರೈ ಬೋಳಂತೂರುಗುತ್ತು, ಕಾಂತಪ್ಪ ಶೆಟ್ಟಿ ಅಗರಿ, ಮಹಾಬಲ ಶೆಟ್ಟಿ ಪಟ್ಲಗುತ್ತು, ಜಯರಾಮ ರೈ ಮಲಾರು, ಸುರೇಶ್ ರೈ ಮಕರಜ್ಯೋತಿ, ರವೀಂದ್ರ ಕಂಬಳಿ ಸುಜೀರುಬೀಡು, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಸಿಎ ಯತೀಶ್ ಭಂಡಾರಿ ಬಿ.ಸಿ.ರೋಡ್, ಪ್ರದೀಪ್ ಆಳ್ವ ಅಜೆಕಲಗುತ್ತು, ಶ್ರೀನಾಥ್ ಶೆಟ್ಟಿ ಮೊಡಂಕಾಪುಗುತ್ತು, ಆನಂದ ಶೆಟ್ಟಿ ಕಾಂಪ್ರಬೈಲು, ಚೇತನ್ ರೈ ಮಾಣಿ ಅವರಿಗೆ ವಿಂಶತಿ ಸನ್ಮಾನವಿರಲಿದೆ ಎಂದು ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.ಮೇ 25 ಮಧ್ಯಾಹ್ನ 2ರಿಂದ ದ.ಕ.ಜಿಲ್ಲಾ ಬಂಟರ ಸಂಘಗಳ ನೃತ್ಯಸ್ಪರ್ಧೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸುವರು. ಸಂಜೆ 5ರಿಂದ ಸಮಾರೋಪ ಸಮಾರಂಭ ನಡೆಯಲಿದೆ ರಾತ್ರಿ 7ರಿಂದ ಯುವ ವಿಭಾಗದಿಂದ ಗಾನ, ನೃತ್ಯ, ಆಹಾರ ಮೇಳ ಯುವೋಚ್ಛಯ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ ಅರಳ, ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಸದಸ್ಯ ಗಣೇಶ್ ಶೆಟ್ಟಿ ಗೋಳ್ತಮಜಲು ಉಪಸ್ಥಿತರಿದ್ದರು.
Be the first to comment on "ಮೇ 24, 25ರಂದು ಬಂಟರ ಸಂಘ ಬಂಟವಾಳ ತಾಲೂಕು ವಿಂಶತಿ ಸಂಭ್ರಮ — | ವಿದ್ಯಾರ್ಥಿಗಳಿಗೆ ಮಾರ್ಗದರ್ಶನ | ಸಾಂಸ್ಕೃತಿಕ ಕಾರ್ಯಕ್ರಮ | ಸಾಧಕರಿಗೆ ಸನ್ಮಾನ, ಗೌರವ"