
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ( ರಿ.) ನೀರಪಾದೆ ವತಿಯಿಂದ ನಿರ್ಮಾಣಗೊಂಡ ನೂತನ ಗುರುಮಂದಿರದ ಲೋಕಾರ್ಪಣೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕ ಕಾರ್ಯಕ್ರಮ ಮೇ.8 ರಿಂದ ಮೇ.10 ರ ವರೆಗೆ ನಡೆಯಲಿದ್ದು, ಮೇ.8ರಂದು ಸಂಜೆ ದಾಸಕೋಡಿಯಿಂದ ನೀರಪಾದೆ ಮಂದಿರದವರೆಗೆ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ನಡೆಯಿತು.
ದಾಸಕೋಡಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ, ಪ್ರಭಾಕರ್ ಭಟ್ ಕಲ್ಲಡ್ಕ, ಉದ್ಯಮಿ ರವಿಶಂಕರ್, ವಿಟ್ಲ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್ ನರ್ಸಪ್ಪ ಪೂಜಾರಿ ಅವರು ಹಸಿರು ಹೊರೆಕಾಣಿಕೆ ಮೆರವಣಿಗೆಗೆ ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.
ದಾಸಕೋಡಿಯಿಂದ ನೀರಪಾದೆ ಮಂದಿರದವರೆಗೆ ಸುಮಾರು ಮೂರುವರೆ ಕಿ.ಮೀ ವರೆಗೆ ಮೆರವಣಿಗೆಗೆ ಮಕ್ಳಳ ಹಾಗೂ ಮಹಿಳೆಯರ ಕುಣಿತದ ಭಜನಾ ತಂಡ, ಗೊಂಬೆ, ವಾದ್ಯ, ಬ್ಯಾಂಡ್ ಹಾಗೂ ಚೆಂಡೆ ವಿಶೇಷ ಮೆರಗು ನೀಡಿತು.
ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಬಳಿಕ ನಡೆದ ಉಗ್ರಾಣದ ಉದ್ಘಾಟನೆಯನ್ನು ಉದ್ಯಮಿ ತುಳಸಿದಾಸ್ ಬೆರ್ಕಳ, ಕೃಷಿಕೆ ಎಳ್ತಿಮಾರ್ ಪುಷ್ಪಾ ಬಿ.ಶೆಟ್ಟಿ ನೆರವೇರಿಸಿದರು.ಈ ಸಂದರ್ಭ ಮಾಜಿ ಶಾಸಕ ರುಕ್ಮಯ ಪೂಜಾರಿ, ಉದ್ಯಮಿ ರಾಘವ ಪೂಜಾರಿ ಬೆಂಗಳೂರು, ನರಿಕೊಂಬು ನಾಲ್ಕೈತ್ತಾಯ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ನರಿಕೊಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಮೋಹನ್ ಪಿಎಸ್. ಟ್ರಸ್ಟಿಗಳಾದ ಶರತ್ ಕುಮಾರ್, ಜಯರಾಮ ಕಲ್ಲಪಾಪು, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಶಿವರಾಜ್ ಕಾಂದಿಲ, ತಾರಾನಾಥ ಸೇಣೆರೆಕೋಡಿ, ಚಂದ್ರಶೇಖರ ಚೆಂಡೆ, ಲೋಕೇಶ್ ಅಮೀನ್, ಯಾದವ, ಕೃಷ್ಣಪ್ಪ ಸೇಣೆರೆಕೋಡಿ, ಕೃಷ್ಣಪ್ಪ ಪೂಜಾರಿ ತೋಟ, ಕೃಷ್ಣಪ್ಪ ಪೂಜಾರಿ ಬೆಮ್ಮೆರೆಕೋಡಿ, ಮಲ್ಲಿಕಾ ಸೇಣೆರೆಕೋಡಿ, ಶಶಿಕಲಾ ಪಿ.ಎಸ್. ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಭಾನುವಾರ ಬೆಳಗ್ಗಿನ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರಿಗೆ ಕಲಶಾಬಿಷೇಕ, ಅಲಂಕಾರ ಶ್ರೀ ಗುರುಪಾದಾರ್ಚನೆ, ಆಹ್ವಾನಿತ ಭಜನಾ ತಂಡಗಳಿಂದ ಶ್ರೀನಾರಾಯಣಗುರು ಮಕ್ಕಳ ಕುಣಿತ ಭಜನಾ ಮಂಡಳಿ ಪ್ರಾಯೋಜಕತ್ವದಲ್ಲಿ ಶ್ರೀ ಗುರುವಿಗೆ ಕುಣಿತ ಭಜನಾರ್ಪಣೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಭಜನಾ ಸಂಕೀರ್ತನೆ, ರಾಧಾಕೃಷ್ಣ ಅಡ್ಯಂತಾಯ ಅವರಿಂದ ಹರಿಕಥಾ ಸಂಕೀರ್ತನೆ, ಲಾಸ್ಯನಾಟ್ಯ ನಿಕೇತನ ನರಿಕೊಂಬು ಬಬಿತಾ ಅವರಿಂದ ಭರತನಾಟ್ಯ, ಸಂಜೆ ದೀಪಾರಾಧನೆ, ಮಹಾಪೂಜೆ, ಧಾರ್ಮಿಕ ಸಭೆ, ಅನ್ನಪ್ರಸಾದ ಇರಲಿದ್ದು, ಬಳಿಕ ರಾತ್ರಿ 10ರಿಂದ ಕಥೆ ಎಡ್ಡುಂಡು ನಾಟಕ ಪ್ರದರ್ಶನ ಇರಲಿದೆ.


Be the first to comment on "ಬ್ರಹ್ಮಶ್ರೀ ನಾರಾಯಣಗುರುವರ್ಯರ ಮೂರ್ತಿ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕ: ಹೊರೆ ಕಾಣಿಕೆ ಮೆರವಣಿಗೆ"