ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾನೆಮಂಗಳೂರು ಪೇಟೆಯ ಅಕ್ಕರಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಮಾರಕಾಯುಧದಲ್ಲಿ ಇರಿದ ಘಟನೆ ನಡೆದಿದೆ. ಇಲ್ಲಿನ ಅಕ್ಕರಂಗಡಿ ನಿವಾಸಿ ಹಮೀದ್ (38) ಎಂಬವರಿಗೆ ದುಷ್ಕರ್ಮಿಗಳು ಇರಿದಿದ್ದಾಗಿ ದೂರಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಅಕ್ಕರಂಗಡಿಯಲ್ಲಿದ್ದ ಪೈಂಟಿಂಗ್ ಕೆಲಸ ಮಾಡುತ್ತಿರುವ ಹಮೀದ್ ಯಾನೆ ಅಮ್ಮಿ ಅವರಿಗೆ ಬೈಕ್ ನಲ್ಲಿ ಆಗಮಿಸಿದ ಆಗಂತುಕರು ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಹಮೀದ್ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹಮೀದ್ ಅಲ್ಲಿರುವುದನ್ನು ಗಮನಿಸಿ ಜನಸಂಚಾರ ವಿರಳವಾದ ಬಳಿಕ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ತಲವಾರು ಅಥವಾ ಚೂರಿಯಂಥ ಹರಿತವಾದ ಆಯುಧದಲ್ಲಿ ದಾಳಿ ಮಾಡಿದ್ದಾರೆ.
ಪೈಂಟರ್ ವೃತ್ತಿಯಲ್ಲಿ ನಿರತರಾಗಿರುವ ಹಮೀದ್ ಅವರಿಗೆ ಇರಿದು ತೆರಳಿದವರಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ತನಿಖೆಯಿಂದ ಗೊತ್ತಾಗಬೇಕಾಗಿದೆ. ನಗರ ಪೊಲೀಸ್ ಠಾಣೆ ಎಸ್.ಐ. ರಾಮಕೃಷ್ಣ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇರಿತದಿಂದ ಹಮೀದ್ ಅವರ ಕೈಗೆ ಆಳವಾದ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
Be the first to comment on "ಪಾಣೆಮಂಗಳೂರು ಪೇಟೆಯಲ್ಲಿ ವ್ಯಕ್ತಿಗೆ ಮಾರಕಾಯುಧದಿಂದ ಇರಿತ ಪ್ರಕರಣ"