ಬಂಟ್ವಾಳ ಮಣಿಹಳ್ಳದ ಹಿಂದು ಯುವಸೇನೆ ವತಿಯಿಂದ ಎಳ್ಳುಗಂಟು ದೀಪೋತ್ಸವ ಮಣಿಹಳ್ಳದಲ್ಲಿ ನಡೆಯಿತು. 13ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ರತ್ನಾಕರ ಭಟ್ ಸರಪಾಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದರು.
ತಾರನಾಥ ಮಣಿ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದು ಯುವಸೇನೆ ಕೇಂದ್ರೀಯಮಂಡಳಿ ಅಧ್ಯಕ್ಷ ಯಶೋಧರ ಚೌಟ, ಬಿಜೆಪಿ ಕ್ಷೇತ್ರಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ತಾಲೂಕು ಘಟಕ ಗೌರವಾಧ್ಯಕ್ಷ ರಾಮಚಂದ್ರಗೌಡ ಮಣಿ, ಅಧ್ಯಕ್ಷ ವಸಂತ್ ಕುಮಾರ್ ವಿ ಮಣಿಹಳ್ಳ, ಮುಖಂಡರಾದ ಹರಿಕೃಷ್ಣ ಬಂಟ್ವಾಳ, ದಿನೇಶ್ ಹಮ್ಟೂರು, ನವೀನ್ ಕುಮಾರ್ ಮೀನಾಕ್ಷಿ ಜಿ ಗೌಡ, ವಸಂತ ತಂತ್ರಿ ಪಣೇಕಲ , ದಿನೇಶ್ ಪೂಜಾರಿ ಪಣೇಕಲ , ಜಯಪ್ರಕಾಶ್ ಜಕ್ರಿಬೆಟ್ಟು, ಸುಜಾತ ಜಯ ಸಪಾಲ್ಯ ಕೊಂಗ್ರಬೆಟ್ಟು , ಮುರಳಿದರ ಭಟ್ ಹಳೆ ಗೇಟು ಉಪಸ್ಥಿತಿಯಲ್ಲಿ 7 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಇಬ್ಬರು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ವಸಂತ್ ಕುಮಾರ್ ಮಣಿ ಹಳ್ಳ ಸ್ವಾಗತಿಸಿ, ಉಮೇಶ್ ಧನ್ಯವಾದ ನೀಡಿದರು ಉಮಾಶಂಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು
Be the first to comment on "ಹಿಂದು ಯುವಸೇನೆ ವತಿಯಿಂದ ಎಳ್ಳುಗಂಟು ದೀಪೋತ್ಸವ"