ಜನವರಿ 26ರವರೆಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಿಂದ ಉತ್ಸವ ನಡೆಯುವ ಜಾಗದವರೆಗಿನ ಆಕರ್ಷಕ ಜಾನಪದ ದಿಬ್ಬಣಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.

KALOTSAVA
ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ರೆ.ಫಾ. ವಲೇರಿಯನ್ ಡಿಸೋಜ, ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಪ್ರಧಾನ ಆರ್ಚಕ ಮಾದಕಟ್ಟೆ ಈಶ್ವರ ಭಟ್, ಪಾಂಡವರಕಲ್ಲು ದ.ಕ.ಜಿಲ್ಲಾ ಮೆನೇಜ್ಮೆಂಟ್ ವರ್ಕಿಂಗ್ ಕಮಿಟಿಯ ಕೆ.ಪಿ.ಉಮ್ಮರ್ ಮುಸ್ಲಿಯಾರ್ ಸಾಂಕೇತಿಕವಾಗಿ ಚೆಂಡೆ ನುಡಿಸುವ ಮೂಲಕ ಜಾನಪದ ದಿಬ್ಬಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಪ್ರಧಾನ ಸಂಚಾಲಕ, ಸ್ಥಾಪಕ ಮೋಹನದಾಸ ಕೊಟ್ಟಾರಿ, ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ಉಪಾಧ್ಯಕ್ಷೆ ಫೌಝಿಯಾ, ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಸಮಿತಿ ಪದಾಧಿಕಾರಿಗಳಾದ ಇಬ್ರಾಹಿಂ ಕೈಲಾರ್, ಶೋಭಾ ಶೆಟ್ಟಿ ಬೊಳ್ಳಾಯಿ, ರಾಜಾ ಚೆಂಡ್ತಿಮಾರ್, ದೇವಪ್ಪ ಕುಲಾಲ್ ಸಹಿತ ಗೌರವ ಸಲಹೆಗಾರರು, ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸ್ವಾಗತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸರ್ವಧರ್ಮಗಳ ಸಂಸ್ಕೃತಿಗಳನ್ನು ಒಳಗೊಂಡ ದಿಬ್ಬಣದಲ್ಲಿ ಸಾಂತಾಕ್ಲಾಸ್ ಸಹಿತ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಟ್ಯಾಬ್ಲೊಗಳು, ವೇಷಗಳು, ಕುಣಿತ ಭಜನೆ, ಚೆಂಡೆ, ಗೊಂಬೆ, ಹುಲಿವೇಷ ಸಹಿತ ಹಲವು ವೈಶಿಷ್ಟ್ಯಗಳು ಕಂಡುಬಂದವು.

KALOTSAVA
Be the first to comment on "ಕರಾವಳಿ ಕಲೋತ್ಸವ: ಆಕರ್ಷಕ ಜಾನಪದ ದಿಬ್ಬಣಕ್ಕೆ ಚಾಲನೆ"