![](https://i0.wp.com/bantwalnews.com/wp-content/uploads/2024/05/IMG-20240521-WA0029-1.jpg?resize=768%2C1024&ssl=1)
ಟ್ರಾನ್ಸ್ ಫಾರ್ಮರ್ ಗೆ ಬೆಂಕಿ ತಗಲಿರುವುದು
ಬಿ.ಸಿ.ರೋಡು ಕೈಕಂಬದ ಮೊಡಂಕಾಪು ಬಳಿ ಮಂಗಳವಾರ ಸುರಿದ ಗಾಳಿ ಮಳೆಯ ಸಂದರ್ಭ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬಕ್ಕೆ ಶಾರ್ಟ್ಸರ್ಕಿಟ್ನಿಂದ ಬೆಂಕಿ ಕಾಣಿಸಿಕೊಂಡು ಟ್ರಾನ್ಸ್ಫಾರ್ಮರ್ನ ಕಂಬ ಹಾಗೂ ಇದಕ್ಕೆ ಸಂಬಂಧಪಟ್ಟ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಹೋದವು. ಮೆಸ್ಕಾಂ, ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದರು. ಕೆಲ ಕಾಲ ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರಿ ಗಾಳಿಯಿಂದಾಗಿ ಕುರಿಯಾಳ ಗ್ರಾಮದ ದೊಂಪದ ಬಳಿ ಎಂಬಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬವು ಬಿದ್ದಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಮೊಡಂಕಾಪು ಬಳಿ ಟ್ರಾನ್ಸ್ಫಾರ್ಮರ್ ಇದ್ದ ಕಂಬಕ್ಕೆ ಬೆಂಕಿ, ಕುರಿಯಾಳದಲ್ಲಿ ಬಿದ್ದ ಕಂಬ"