ವಿಶ್ವ ಪರಿಸರ ದಿನಾಚರಣೆಗೆ ಪೂರಕವಾಗಿ ಮೊಡಂಕಾಪುವಿನಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ವತಿಯಿಂದ ನಡೆದ ಈ ಅಭಿಯಾನಕ್ಕೆ ರೋಟರಿ ಕ್ಲಬ್ ಮೊಡಂಕಾಪು ಸದಸ್ಯರು ಜತೆಗೂಡಿದರು. ಬಂಟ್ವಾಳ ಪುರಸಭೆಯ ನೆರವಿನಿಂದ ದೀಪಿಕಾ ಹೈಸ್ಕೂಲಿನಿಂದ ಗೋರೆಮಾರ್ ವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಲಾಯಿತು. ಮೊಡಂಕಾಪು ಚರ್ಚಿನ ಪ್ರಧಾನ ಗುರು ವಂದನೀಯ ವಲೇರಿಯನ್ ಡಿ‘ಸೋಜಾ, ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಗುರು ವಂದನೀಯ ಮೆಲ್ವಿನ್ ಲೋಬೊ ಹಾಗೂ ಮೊಡಂಕಾಪು ರೋಟರಿ ಕ್ಲಬ್ ಸದಸ್ಯರು ಈ ಸ್ವಚ್ಚತಾ ಅಭಿಯಾನದ ನೇತೃತ್ವ ವಹಿಸಿದ್ದರು. ಹಲವಾರು ಮಂದಿ ಅಭಿಯಾನದಲ್ಲಿ ಪಾಲ್ಗೊಂಡರು ಚಿತ್ರಗಳಿಗೆ ಮುಂದೆ ನೋಡಿರಿ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಮೊಡಂಕಾಪು: ಸ್ವಚ್ಛತಾ ಅಭಿಯಾನ, ವಿಶ್ವ ಪರಿಸರ ದಿನಾಚರಣೆಗೆ ಪೂರ್ವಭಾವಿಯಾಗಿ ಈ ಕಾರ್ಯ"