ಬಂಟ್ವಾಳ: ಪುದು ಗ್ರಾಮ ಪಂಚಾಯಿತಿನ ಉಪಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಅಭ್ಯರ್ಥಿಗಳಾದ ಅಬ್ದುಲ್ ಲತೀಫ್ 39, ಮುಹಮ್ಮದ್ ಅಶ್ರಫ್ ಮಾರಿಪಳ್ಳ 140, ಮೊಹಮ್ಮದ್ ಇಕ್ಬಾಲ್ ಪಾಡಿ 385 ಮತಗಳನ್ನು ಗಳಿಸಿದ್ದರೆ, 8 ಮತಗಳು ತಿರಸ್ಕೃತಗೊಂಡಿವೆ. ಒಟ್ಟು 572 ಮತಗಳು ಚಲಾವಣೆಗೊಂಡವು.
ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ ಚುನಾವಣೆ ಅಧಿಕಾರಿ ತಾಪಂ ಇಒ ರಾಜಣ್ಣ, ಸಹಾಯಕ ಚುನಾವಣಾಧಿಕಾರಿ ಪಿಡಿಒ ಹರೀಶ್ ಕೆ.ಎ, ಏಣಿಕೆ ಮೇಲ್ವಿಚಾರಕರಾದ ಉಪತಹಸೀಲ್ದಾರ್ ನವೀನ್ ಬೆಂಜನಪದವು ಉಪತಹಸೀಲ್ದಾರರು, ಎಣಿಕೆ ಸಹಾಯಕರಾಗಿ ಕಂದಾಯ ನಿರೀಕ್ಷಕರಾದ ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ, ಸಿಬಂದಿಯಾದ ಶ್ರೀಕಲಾ, ಹಾಗೂ ಸುಂದರ, ಕಿರಣ್, ಚಂದು ಭಾಗವಹಿಸಿದ್ದರು.ಹಿಂದುಳಿದ ವರ್ಗ ಎ. ಮೀಸಲಾತಿಯಲ್ಲಿ ಸ್ಪರ್ಧಿಸಿ ಸದಸ್ಯ ನಾಗಿ ಆಯ್ಕೆಯಾಗಿದ್ದ ಹುಸೈನ್ ಅವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು (ದಕ್ಷಿಣ ಭಾಗ) ಮತಗಟ್ಟೆಯಲ್ಲಿ ಮತದಾನ ನಡೆದಿತ್ತು.
ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದ ಹುಸೇನ್ ಪಾಡಿ ಅವರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಪ್ರಸ್ತುತ ಅವರ ಸ್ಥಾನವನ್ನು ಅವರ ಪುತ್ರ ಇಕ್ಬಾಲ್ ಅವರು ತುಂಬಿದ್ದಾರೆ. ಪ್ರಸ್ತುತ ವಿಧಾನಸಭಾ ಸ್ಪೀಕರ್ ಆಗಿರುವ ಶಾಸಕ ಯು.ಟಿ.ಖಾದರ್ ಅವರ ಅಭಿವೃದ್ಧಿ ಕಾರ್ಯ, ಗ್ರಾ.ಪಂ.ನ ಆಡಳಿತವನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ ಎಂದರು.
ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ವಿರೋಧ ಪಕ್ಷಗಳಾದ ಬಿಜೆಪಿ, ಎಸ್‌ಡಿಪಿಐಗಳ ಮತಗಳ ಸಂಕ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿ ಠೇವಣಿಯನ್ನೇ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದರು.
ವಿಜೇತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಅವರು ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.
ಪಂಚಾಯತ್ ಅಧ್ಯಕ್ಷೆ ರಶಿದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸಜೀರು, ಸದಸ್ಯೆ ರೆಹನಾ, ವಲಯ ಕಾಂಗ್ರೆಸ್ ಅಧ್ಯಕ್ಷ ದಿಲ್‌ಶಾನ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ತೌಶೀಫ್ ವಳಚ್ಚಿಲ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಪ್ರಮುಖರಾದ ಹಕೀಂ ಮಾರಿಪಳ್ಳ, ಕೆರೀಂ ಮಾರಿಪಳ್ಳ, ಫಯಾಜ್ ಮಾರಿಪಳ್ಳ, ಇರ್ಶಾದ್ ಪಾಡಿ, ಇಬ್ರಾಹಿಂ ಮಾರಿಪಳ್ಳ, ಘಣಿ ಮಾರಿಪಳ್ಳ, ಐ.ಎಸ್.ಇಮ್ರಾನ್, ಸಲೀಂ ಮಲ್ಲಿ ಉಪಸ್ಥಿತರಿದ್ದರು.
Be the first to comment on "ಪುದು ಗ್ರಾಪಂ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು"