ನೇತ್ರಾವತಿ ನದಿ ಬಂಟ್ವಾಳದಲ್ಲಿ ಇಳಿಮುಖವಾಗಿದೆ. ಆದರೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಳೆಗೆ ಬಿಡುವಿಲ್ಲ. ಅಂತೆಯೇ ಅನಾಹುತಗಳಿಗೂ ಬಿಡುವು ದೊರೆತಿಲ್ಲ. ಇಂದು ಬೆಳಗ್ಗೆ ಗುಡ್ಡ ಜರಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಾರ್ವಜನಿಕ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಲೊರೊಟ್ಟೊ ಎಂಬಲ್ಲಿ ನಡೆದಿದೆ. ಲೊರೆಟ್ಟೊ ಮಹಲ್ ತೋಟ ಎಂಬಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಹಲ್ ತೋಟ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ಬದಿಯಲ್ಲಿರುವ ಗುಡ್ಡ ಜರಿದು ಬಿದ್ದಿದೆ. ಬೃಹತ್ ಗಾತ್ರದ ಅಪಾಯಕಾರಿ ಕಲ್ಲುಬಂಡೆ ಉರುಳಿ ಬಿದ್ದು ರಸ್ತೆಗೆ ಹಾನಿಯಾಗುವುದರ ಜೊತೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ನೇತ್ರಾವತಿ ನದಿ ಇಳಿಮುಖವಾದರೂ, ನಿಲ್ಲದ ಮಳೆ: ಲೊರೆಟ್ಟೊ ಸಮೀಪ ಬಂಡೆ ಉರುಳಿ ರಸ್ತೆ ಬಂದ್"