ಒಡಿಯೂರಿನಲ್ಲಿ ನಡೆದ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ ಹಿನ್ನೆಲೆಯಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಐವರು ಸಾಧಕರಿಗೆ ತುಳು ಸಿರಿ ಮಾನಾದಿಗೆ (ಸನ್ಮಾನ) ಗೌರವಾರ್ಪಣೆ ಮಾಡಲಾಯಿತು. ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀ ಮಾತಾನಂದಮಯೀ, ಹಿರಿಯ ಸಾಹಿತಿ ಸಮ್ಮೇಳನಾಧ್ಯಕ್ಷ ಡಾ. ವಸಂತ ಕುಮಾರ ಪೆರ್ಲ, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಳೂರು, ವಾಮಯ್ಯ ಬಿ.ಶೆಟ್ಟಿ, ದಯಾನಂದ ಹೆಗ್ಡೆ, ಒಡಿಯೂರು ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ ಹಾಗೂ ಸಂಜೀವಿನಿ ಆಸ್ಪತ್ರೆ ಮುಂಬೈನ ಆಡಳಿತ ನಿರ್ದೇಶಕ ಡಾ. ಸುರೇಶ್ ರಾವ್ ಸಹಿತ ಗಣ್ಯರ ಸಮಕ್ಷಮ ಹಿರಿಯ ಮೃದಂಗವಾದಕ ಶತಾಯುಷಿ ವಿದ್ವಾನ್ ಬಾಬು ರೈ, ಸಾಹಿತಿ ಸಂಶೋಧಕಿ ಡಾ. ಸಾಯಿಗೀತಾ ತೋಕೂರುಗುತ್ತು, ಸಹಕಾರಿ ಎಸ್.ಬಿ.ಜಯರಾಮ ರೈ, ತುಳು ವಸ್ತು ಸಂಗ್ರಾಹಕ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಕ ರಾಮಣ್ಣ ಗೌಡ ಅವರನ್ನು ಗೌರವಿಸಲಾಯಿತು. ಯಶವಂತ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. PHOTO COURTESY: click point modeling studio, Kanyana,
Be the first to comment on "ಒಡಿಯೂರು ತುಳು ಸಾಹಿತ್ಯ ಸಮ್ಮೇಳನದಲ್ಲಿ ಐವರು ಸಾಧಕರಿಗೆ ತುಳುಸಿರಿ ಮಾನಾದಿಗೆ"