ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿಗೆ ಕುಂಬಳೆ ಸುಂದರರಾವ್ ಆಯ್ಕೆ

  • 7ರಂದು ಒಡಿಯೂರಿನಲ್ಲಿ ಪ್ರಶಸ್ತಿ ಪ್ರದಾನ

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಕುಂಬಳೆ ಸುಂದರ ರಾವ್

ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಗಂಡುಗತ್ತಿನ ವೇಷಧಾರಿ, ‘ಅಭಿನವ ಕೋಟಿಬಿರುದಾಂಕಿತರಾದ ದಿ| ಬೋಳಾರ ನಾರಾಯಣ ಶೆಟ್ಟಿ ಅವರ ಸ್ಮರಣೆಗಾಗಿ ನೀಡುವಬೋಳಾರ ಪ್ರಶಸ್ತಿಗೆ 2019-20ನೇ ಸಾಲಿನಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ, ಮಾಜಿ ಶಾಸಕ 89 ಹರೆಯದ ಕುಂಬಳೆ ಸುಂದರ ರಾವ್ ಆಯ್ಕೆಯಾಗಿದ್ದಾರೆ.

ಜಾಹೀರಾತು

ಪ್ರಶಸ್ತಿಯು ರೂ. 20,000 ನಗದು ಮತ್ತು ಬಿನ್ನವತ್ತಳೆಗಳನ್ನೊಳಗೊಂಡಿದೆ ಎಂದು ದಿ. ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ ಅಧ್ಯಕ್ಷ ಬೋಳಾರ ಕರುಣಾಕರ ಶೆಟ್ಟಿ, ವಿಶ್ವಸ್ಥ ಮಂಡಳಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಗೋಪಾಲ ಶೆಟ್ಟಿ ಬೋಳಾರ, ವಾಸುದೇವ ಆರ್. ಕೊಟ್ಟಾರಿ, ಆಯ್ಕೆ ಸಮಿತಿ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

 ಬೋಳಾರ ಅವರ ಪುತ್ರ ದೋಹಾಕತಾರ್ ಉದ್ಯಮಿ ಬೋಳಾರ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ 2009ರಂದು ಸ್ಥಾಪನೆಗೊಂಡದಿ| ಬೋಳಾರ ನಾರಾಯಣ ಶೆಟ್ಟಿ ಸ್ಮಾರಕ ಯಕ್ಷಪ್ರತಿಷ್ಠಾನವು ಇದುವರೆಗೆ 18 ಮಂದಿ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿದೆ. ಅವರುಗಳೆಂದರೆ, ಮಲ್ಪೆ ರಾಮದಾಸ ಸಾಮಗ, ಮಿಜಾರು ಅಣ್ಣಪ್ಪ (೨೦೦೯); ಕೋಳ್ಯೂರು ರಾಮಚಂದ್ರರಾವ್, ಬೋಳಾರ ಸುಬ್ಬಯ್ಯ ಶೆಟ್ಟಿ (೨೦೧೦); ಪೆರುವಾಯಿ ನಾರಾಯಣ ಶೆಟ್ಟಿ, ಜಪ್ಪು ದಯಾನಂದ ಶೆಟ್ಟಿ (೨೦೧೧); ಕೆ.ಹೆಚ್. ದಾಸಪ್ಪ ರೈ, ಅಡ್ಕಸ್ಥಳ ಸಂಜೀವ ಶೆಟ್ಟಿ (೨೦೧೨); ಪುಂಡರೀಕಾಕ್ಷ ಉಪಾಧ್ಯಾಯ, ಸಂಜಯ್ ಕುಮಾರ್ ಶೆಟ್ಟಿ ಮತ್ತು ಬಾಯಾರು ರಘುನಾಥ ಶೆಟ್ಟಿ (೨೦೧೩); ಬಜಾಲ್ ಜನಾರ್ದನ, ಬೆಳ್ಳಾರೆ ವಿಶ್ವನಾಥ ರೈ (೨೦೧೪); ಮುಂಡಾಜೆ ಬಾಲಕೃಷ್ಣ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ (೨೦೧೫); ಸಂಪಾಜೆ ಶೀನಪ್ಪ ರೈ (೨೦೧೬); ಅರುವ ಕೊರಗಪ್ಪ ಶೆಟ್ಟಿ (೨೦೧೭); ಬೊಟ್ಟಿಕೆರೆ ಪುರುಷೋತ್ತಮ ಪೂಂಜ (೨೦೧೮). ಬಹುತೇಕ ದಿ| ಬೋಳಾರ ಅವರ ಸಹಕಲಾವಿದರಾಗಿದ್ದ ಹಿರಿಯ ಕಲಾವಿದರನ್ನೇ ಆಯ್ದು ಪ್ರಶಸ್ತಿಯನ್ನು ನೀಡಲಾಗಿದೆ.

 ಕುಂಬಳೆ ಸುಂದರರಾವ್ :

ಜಾಹೀರಾತು

ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿಗೆ ಮಾರ್ಚ್ 20, 1934ರಲ್ಲಿ ಕುಂಬಳೆಯಲ್ಲಿ ಜನಿಸಿದ ಸುಂದರ ರಾಯರು ಕಲಿತದ್ದು ಕೇವಲ ಏಳನೇಯ ತರಗತಿ. ಕುಂಬ್ಳೆ ಕುಟ್ಯಪ್ಪನವರಿಂದ ಅವಶ್ಯವಿದ್ದಷ್ಟು ಯಕ್ಷಗಾನ ನಾಟ್ಯಾಭ್ಯಾಸ ಮಾಡಿ 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಬಣ್ಣದ ಬದುಕಿಗೆ ಅಡಿಯಿಟ್ಟರು. ಮುಂದೆ ಇರಾ ಸೋನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಕಾಲ ಕಲಾವಿದನಾಗಿ ದುಡಿದ ಅನುಭವ ಅವರದು. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದು ಅವರ ಹೆಚ್ಚುಗಾರಿಕೆ. ರಾಮ, ಕೃಷ್ಣ, ಭರತ, ಪರೀಕ್ಷಿತ, ಸುಧನ್ವ, ವಿಶ್ವಾಮಿತ್ರ, ಕರ್ಣ, ವಿಷ್ಣು, ಈಶ್ವರ, ಚಾರ್ವಾಕ ಇತ್ಯಾದಿ ಅವರಿಗೆ ಕೀರ್ತಿ ತಂದ ಪಾತ್ರಗಳು. ತಾಳಮದ್ದಳೆ ಕ್ಷೇತ್ರದಲ್ಲಿ ಬಹುಬೇಡಿಕೆಯ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿರುವ ಕುಂಬಳೆಯವರ ಮಾತಿನ ಧಾಟಿಯನ್ನು ಅನುಕರಿಸುವ ಅದೆಷ್ಟೋ ಯುವಕಲಾವಿದರಿದ್ದಾರೆ. ಪ್ರಾಸಬದ್ಧ ಮಾತುಗಾರಿಕೆಗೆ ಹೆಸರಾದ ಅವರು ಉಳಿದವರೂ ಅದನ್ನು ಅನುಕರಿಸ ಹೊರಟಾಗ ಪ್ರಾಸ ಪ್ರಯೋಗವನ್ನೇ ಬಿಟ್ಟುಬಿಟ್ಟರು. ಸುಂದರ ರಾಯರು ಅಬುಧಾಬಿ, ದುಬಾ, ಬೆಹರಿನ್ ಮೊದಲಾದ ರಾಷ್ಟ್ರಗಳಲ್ಲಿ ಯಕ್ಷಗಾನ ತಂಡದೊಂದಿಗೆ ಸಂಚಾರ ಮಾಡಿದ್ದಾರೆ. ಅನೇಕ ವರ್ಷಗಳಿಂದ ಚೌತಿಯ ಸಂದರ್ಭದಲ್ಲಿ ತನ್ನದೇ ಕಲಾವಿದರ ತಂಡದೊಂದಿಗೆ ಕರ್ನಾಟಕದ ಉದ್ದಗಲಕ್ಕೆ ಸಂಚರಿಸಿ ನೂರಾರು ಕಾಲಮಿತಿಯ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಅನುಭವವೂ ಅವರಿಗಿದೆ. ಇನ್ನೂರಕ್ಕಿಂತ ಹೆಚ್ಚು ಧ್ವನಿ ಸುರುಳಿಗಳು ಇಪ್ಪತ್ತೈದಕ್ಕಿಂತ ಹೆಚ್ಚು ಸಿಡಿ ದೃಶ್ಯ ತಟ್ಟೆಗಳಲ್ಲೂ ಅವರು ಪಾತ್ರ ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯಕ್ಷಗಾನ ರಂಗದ ಜನಪ್ರಿಯತೆ ಕುಂಬಳೆಯವರನ್ನು ರಾಜಕೀಯವಾಗಿಯೂ ಗೆಲ್ಲಿಸಿತು. ೧೯೯೪ಲ್ಲಿ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅವರು ೧೯೯೮ರ ತನಕ ಕರ್ನಾಟಕದ ವಿಧಾನಸಭೆಯಲ್ಲಿ ತನ್ನ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ೨೦೦೯ರಿಂದ ೨೦೧೨ರ ವರೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ದುಡಿದಿದ್ದಾರೆ. ಸಂಸ್ಕಾರ ಭಾರತಿಯ ಕರ್ನಾಟಕ ಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ ಇತ್ತೀಚಿನವರೆಗೂ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ಭಾಷಣ, ಧಾರ್ಮಿಕ ಪ್ರವಚನಗಳಲ್ಲಿ ಅವರದ್ದು ಎತ್ತಿದ ಕೈ. ಅಮೇರಿಕಾದ ಚಿಕಾಗೋದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಪೇಜಾವರ ವಿಶ್ವೇಶ್ವತೀರ್ಥರಿಂದ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಇತ್ಯಾದಿ ನೂರಾರು ಮಾನಸನ್ಮಾನಗಳಿಗೆ ಕುಂಬಳೆ ಪಾತ್ರರಾಗಿದ್ದಾರೆ. ೨೦೦೭ರಲ್ಲಿ ಡಾ. ಡಿ.ಕೆ. ಚೌಟ ಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತುಸುಂದರಕಾಂಡಗ್ರಂಥ ಸಮರ್ಪಣೆಯಾಗಿದೆ.

 ದಶಂಬರ್ , ೨೦೧೯ರಂದು ಶನಿವಾರ ಪೂರ್ವಾಹ್ನ ಗಂ. ೧೧.೦೦ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗುವಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕುಂಬಳೆ ಸುಂದರರಾಯರಿಗೆ ಬೋಳಾರ ಪ್ರಶಸ್ತಿ ಪ್ರದಾನ ಮಾಡುವರು. ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.

ಜಾಹೀರಾತು

 ಯಕ್ಷಗಾನ ಪ್ರದರ್ಶನ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮತ್ತು ಶ್ರೀದತ್ತ ಮಹಾಯಾಗ ಪ್ರಯುಕ್ತ ದಶಂಬರ ೫ರಿಂದ ೧೧ರ ವರೆಗೆ ವಿಶೇಷ ಧಾರ್ಮಿಕಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ದಿನಾಂಕ ೭ರಂದು ಶನಿವಾರ ಅಪರಾಹ್ನ ಗಂ. .೦೦ರಿಂದ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮತ್ತು ಬಳಗದಿಂದ ಯಕ್ಷಗಾನ ಬಯಲಾಟ ಜರಗಲಿದೆ. ದಶಂಬರ ೧೧ರಂದು ಬುಧವಾರ ಶ್ರೀದತ್ತ ಮಹಾಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ರಾತ್ರಿ ಗಂ. .೩೦ರಿಂದ ಬೋಳಾರ ಕರುಣಾಕರ ಶೆಟ್ಟರ ಪ್ರಾಯೋಜಕತ್ವದಲ್ಲಿ ಶ್ರೀ ಪೆರ್ಡೂರು ಮೇಳದವರಿಂದ ಬಡಗುತಿಟ್ಟಿನ ಯಕ್ಷಗಾನ ಬಯಲಾಟವನ್ನು ಏರ್ಪಡಿಸಲಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿಗೆ ಕುಂಬಳೆ ಸುಂದರರಾವ್ ಆಯ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*