
PHOTO COURTESY: click point modeling studio, Kanyana,

PHOTO COURTESY: click point modeling studio, Kanyana,
ಒಡಿಯೂರಿನಲ್ಲಿ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಮಂಗಳವಾರ ರಾತ್ರಿ ನಡೆಯಿತು. ಶ್ರೀಸಂಸ್ಥಾನದಿಂದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ಹೋಗಿ, ಕನ್ಯಾನ ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥ ಹಿಂದಿರುಗುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀ ಮಾತಾನಂದಮಯೀ ಸಹಿತ ವಿವಿಧ ಗಣ್ಯರು, ಭಕ್ತರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ಚಿತ್ರ: ಕ್ಲಿಕ್ ಪಾಯಿಂಟ್, ಕನ್ಯಾನ
Be the first to comment on "ಒಡಿಯೂರು ರಥೋತ್ಸವ"