


ಬಂಟ್ವಾಳ: ಮಾಣಿ ಸಮೀಪ ಚಲಿಸುತ್ತಿದ್ದ ಮಾರುತಿ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ಪ್ರಯಾಣಿಕರು ಪಾರಾಗಿದ್ದಾರೆ. ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಪ್ರಯಾಣಿಕರು ಕೂಡಲೇ ವಾಹನ ನಿಲ್ಲಿಸಿ ಹೊರಕ್ಕೆ ಬಂದಿದ್ದಾರೆ. ಸ್ಥಳೀಯ ಸರ್ವೀಸ್ ಸ್ಟೇಷನ್ ನಿಂದ ನೀರು ಹರಿಸಲಾಯಿತು. ಘಟನೆಯಲ್ಲಿ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ನೋಡನೋಡುತ್ತಿದ್ದಂತೆ ಧಗಧಗಿಸಿದ ಓಮ್ನಿ!!"