ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ನೂತನ ತಂಡದ ಪದಗ್ರಹಣ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಜುಲೈ 20ರ ಬುಧವಾರ ಸಂಜೆ 6.30ಕ್ಕೆ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷೆ ಪಲ್ಲವಿ ಕಾರಂತ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
![](https://i0.wp.com/bantwalnews.com/wp-content/uploads/2016/10/Bantwalnews-ad3.png?resize=720%2C128&ssl=1)
![](https://i0.wp.com/bantwalnews.com/wp-content/uploads/2016/10/Bantwalnews-ad4.png?resize=720%2C128&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-18-at-7.03.25-PM.jpeg?resize=1024%2C768&ssl=1)
ಪಿಡಿಜಿ ರೊಟೇರಿಯನ್ ಎಂ.ಪಿ.ಎಚ್.ಎಫ್. ರಂಗನಾಥ ಭಟ್ ಪದಗ್ರಹಣ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಗವರ್ನರ್ ಪ್ರಕಾಶ ಕಾರಂತ್, ಪ್ರಮುಖರಾದ ಎಲಿಯಸ್ ಸೈಂಟಿಸ್, ಕೆ.ಸತೀಶ್ ಕುಮಾರ್, ಪದ್ಮನಾಭ ರೈ, ಆಶಾಮಣಿ ಡಿ.ರೈ, ಗಣೇಶ್ ಶೆಟ್ಟಿ ಭಾಗವಹಿಸುವರು. ಜಿಎಸ್ಆರ್ ಪದ್ಮನಾಭ ರೈ ಮತ್ತು ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಮಾರ್ ಅವರ ಕೊಡುಗೆ ಸ್ಮರಿಸಿದ ಅವರು, ರೋಟರಿ ಧ್ಯೇಯೋದ್ದೇಶ ಪಾಲಿಸಿಕೊಂಡು ಕಾರ್ಯನಿರ್ವಹಿಸುವ ಭರವಸೆ ನೀಡಿದರು.
ಜಿಎಸ್ಆರ್ ಪದ್ಮನಾಭ ರೈ, ನಿಯೋಜಿತ ಕಾರ್ಯದರ್ಶಿ ಆಶಾಮಣಿ ಡಿ.ರೈ, ನಿಯೋಜಿತ ಖಜಾಂಚಿ ಗಣೇಶ್ ಶೆಟ್ಟಿ, ಪ್ರಮುಖರಾದ ಜ್ಯೋತೀಂದ್ರ ಶೆಟ್ಟಿ, ದಯಾನಂದ ಶೆಟ್ಟಿ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಜುಲೈ 20ರಂದು ಸಂಜೆ ರೋಟರಿ ಬಿ.ಸಿ.ರೋಡ್ ಸಿಟಿ ನೂತನ ತಂಡದ ಪದಗ್ರಹಣ"