![](https://i0.wp.com/bantwalnews.com/wp-content/uploads/2022/01/Harish-Kodla.jpeg?resize=515%2C1024&ssl=1)
![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2021/12/BANTWALNEWS.jpg?resize=731%2C496&ssl=1)
![](https://i0.wp.com/bantwalnews.com/wp-content/uploads/2022/01/1642917016779.jpg?resize=720%2C443&ssl=1)
![](https://i0.wp.com/bantwalnews.com/wp-content/uploads/2022/01/271135309_7047887361918565_7040698794141801492_n.jpg?resize=526%2C526&ssl=1)
![](https://i0.wp.com/bantwalnews.com/wp-content/uploads/2022/01/IMG-20220123-WA0069.jpg?resize=722%2C1024&ssl=1)
www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ಹೊರಾಂಗಣದಲ್ಲಿ ಯಕ್ಷಮಿತ್ರರು ಕೈಕಂಬ ವತಿಯಿಂದ ನಡೆದ 13ನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಹನುಮಗಿರಿ ಮೇಳದ ಕಲಾವಿದ ಸದಾಶಿವ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಚೌಕಿ ಸಹಾಯಕ ಚಂದ್ರಶೇಖರ ಕುಲಾಲ್ ಹಾಗೂ ಚಕ್ರತಾಳದ ವಸಂತ ವಾಮದಪದವು ಅವರನ್ನೂ ಗೌರವಿಸಲಾಯಿತು.
ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಸಂದರ್ಭ ಯಕ್ಷಮಿತ್ರರು ಬಳಗದ ಸದಾನಂದ ಶೆಟ್ಟಿ ರಂಗೋಲಿ, ಶಂಕರ್ ಶೆಟ್ಟಿ, ಭುಜಂಗ ಸಾಲಿಯಾನ್, ವಿಶ್ವನಾಥ, ಸದಾಶಿವ ಕೈಕಂಬ ಉಪಸ್ಥಿತರಿದ್ದರು. ಯಕ್ಷ ಮಿತ್ರರು ಕೈಕಂಬದ ಕಿಶೋರ್ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಮೇಳದಿಂದ ಶುಕ್ರನಂದನೆ ಯಕ್ಷಗಾನ ಬಯಲಾಟ ಪ್ರದರ್ಶಿತಗೊಂಡಿತು.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಯಕ್ಷಮಿತ್ರರು ಕೈಕಂಬ ವತಿಯಿಂದ ಬಿ.ಸಿ.ರೋಡಿನಲ್ಲಿ ಯಕ್ಷಗಾನ, ಸನ್ಮಾನ"