ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಮಹಿಳೆ ಶನಿವಾರ ಬೆಳಗ್ಗೆ ನದಿಗೆ ಹಾರಿದ್ದಾರೆ. ಸುಮಾರು 9.45ರಿಂದ 10 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿದ್ದನ್ನು ವಾಹನ ಸವಾರರೊಬ್ಬರು ನೋಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯ ಮುಳುಗುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆಯ ಬಳಿಗೆ ಬಂದರೂ ಅದಾಗಲೇ ಮಹಿಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ. ಘಟನೆ ನಡೆದ ಬಳಿಕ ಕೆಲವು ಸಮಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಟ್ರಾಫಿಕ್ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪಾಣೆಮಂಗಳೂರು ಸೇತುವೆಯಿಂದ ನದಿಗೆ ಹಾರಿದ ಮಹಿಳೆ ಶೋಧ ಕಾರ್ಯ"