ಎಸ್.ವೈ.ಎಸ್ ಮತ್ತು ಎಸ್.ಕೆ.ಎಸ್.ಎಸ್.ಎಫ್ ನ ಪರ್ತಿಪ್ಪಾಡಿ ಶಾಖೆ ಆಶ್ರಯದಲ್ಲಿ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ಫೆ.4ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ವಿಟ್ಲ ಪರ್ತಿಪ್ಪಾಡಿ ಮಸೀದಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಪ್ರಧಾನ ಕಾರ್ಯದರ್ಶಿ ವಿ.ಪಿ.ಉಮರ್ ದಾರಿಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇತೃತ್ವವನ್ನು ಸೈಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಅಲ್ ಬುಖಾರಿ,ಅಲ್ ಜಲಾಲಿ, ಚೆರ್ಮಾನ್ ದಾರುಲ್ ಹಂದ್ ಶರಿಯತ್ ಕಾಲೇಜು, ಹೊಸಂಗಡಿ ವಹಿಸುವರು. ಅಧ್ಯಕ್ಷತೆಯನ್ನು ಜಿ. ಎಂ. ಅಬ್ದುರಹ್ಮಾನ್ ಫೈಝಿ (ಮುದರಿಸ್ ಪರ್ತಿಪ್ಪಾಡಿ) ವಹಿಸುವರು. ಹಲವು ಉಲಮಾ ಉಮರಾ ನೇತಾರರೂ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ಫೆ.4ರಂದು ಪರ್ತಿಪ್ಪಾಡಿಯಲ್ಲಿ"