



ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳಿಗೆ ಮೊದಲ ಹಂತದಲ್ಲಿಯೇ ಚುನಾವಣೆ ನಡೆಯಲಿದ್ದು, ಇದರಂತೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಡಿ.7ರಂದು ಹೊರಡಿಸುವ ದಿನಾಂಕವಾಗಿದೆ. ನಾಮಪತ್ರವನ್ನು ಡಿ.11ರೊಳಗೆ ಸಲ್ಲಿಸಬೇಕಾಗಿದ್ದು, 12ರಂದು ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೇಯ ದಿನಾಂಕ ಡಿ.14. ಮತದಾನ ಅವಶ್ಯವಿದ್ದರೆ, ಡಿ.22ರಂದು ಮತದಾನ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಮರುಮತದಾನ ಅವಶ್ಯವಿದ್ದರೆ ಡಿ.24ರಂದು ನಡೆಯಲಿದ್ದು, ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರವಾದ ಬಿ.ಸಿ.ರೋಡಿನ ಮೊಡಂಕಾಪಿನಲ್ಲಿ ಡಿ.30ರಂದು ನಡೆಯಲಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಗ್ರಾಪಂ ಚುನಾವಣೆ: ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಕೆ ಕೊನೇ ದಿನ ಡಿ.11"