ಕ್ವಾರಂಟೈನ್ ಕೇಂದ್ರದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂದೇಶ್ ಶೆಟ್ಟಿ( 34) ಸಾವನ್ನಪ್ಪಿದವರು. ಭಾರತೀಯ ಸೇನೆಯಲ್ಲಿ 14 ವರ್ಷಗಳಿಂದ ಯೋಧರಾಗಿದ್ದ ಸಂದೇಶ್ ಶೆಟ್ಟಿ, ರಜೆಯಲ್ಲಿ ಊರಿಗೆ ಬಂದವರು ಕಳೆದ ಸೋಮವಾರ ಕರ್ತವ್ಯಕ್ಕೆ ಹಿಂದಿರುಗಿದ್ದರು. ಸೋಮವಾರ ಊರಿಗೆ ಅವರ ಪಾರ್ಥಿವ ಶರೀರ ಆಗಮಿಸುವ ನಿರೀಕ್ಷೆ ಇದೆ. ತಂದೆ, ತಾಯಿ, ತಮ್ಮ, ಅಣ್ಣ ಮತ್ತು ತಂಗಿಯನ್ನು ಅವರು ಅಗಲಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಥುರಾದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಯೋಧ ನಿಧನ"