ಮಂಗಳೂರು ಆರ್.ಟಿಓ. ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ

ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು ಕಛೇರಿಯಲ್ಲಿ ಲೈಸೆನ್ಸ್‍ಗೆ ಸಂಬಂಧಿಸಿದ ಕಛೇರಿ ಕೆಲಸಗಳನ್ನು ಮಾರ್ಚ್ 22ರಿಂದ ಸ್ಥಗಿತಗೊಳಿಸಲಾಗಿತ್ತು.  ಇದೀಗ ಮೇ 29ರಿಂದ ಪ್ರಾಯೋಗಿಕವಾಗಿ ಚಾಲನಾ ಪತ್ರದ ಸೇವೆಗಳು ಪ್ರಾರಂಭವಾಗಿದ್ದು,  ಸಾರ್ವಜನಿಕರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ,  ಜೂನ್ 1 ರಿಂದ ಸೇವೆಗಳು ಲಭ್ಯವಾಗಲಿದೆ. ಅವುಗಳ ವಿವರ ಈ ಕೆಳಗಿನಂತಿರುತ್ತದೆ.

ಜಾಹೀರಾತು

1) ಕಲಿಕಾ ಲೈಸೆನ್ಸ್ ನೀಡುವಿಕೆ. (ಎಲ್.ಎಲ್.ಪರೀಕ್ಷೆ)
2) ಚಾಲನಾ ಅನುಜ್ಞಾ ಪತ್ರ ನೀಡುವಿಕೆ.(ಡಿ.ಎಲ್. ಪರೀಕ್ಷೆ)
3) ಚಾಲನಾ ಅನುಜ್ಞಾ ಪತ್ರ ನವೀಕರಣ
4) ವಿಳಾಸ ಬದಲಾವಣೆ.
5) ನಿರ್ವಾಹಕ ಲೈಸೆನ್ಸ್ ನೀಡುವಿಕೆ/ ನವೀಕರಣ
6) ಇಂಟರ್ ನ್ಯಾಶನಲ್ ಡ್ರೈವಿಂಗ್ ಹಾಗೂ ಇತರ ಸೇವೆಗಳು.

ಕೋವಿಡ್-19 ರ ಜೊತೆ ಸೇರಿ ಬದುಕಬೇಕಾಗಿರುವುದರಿಂದ ಕರೋನಾ ಸೊಂಕೀತರಿಂದ ದೂರವಾಗಿರಲು ಸಾಮಾಜಿಕ ಅಂತರ ಹಾಗೂ ಜನದಟ್ಟಣೆ ಕಾಪಾಡಲು,  ನಮ್ಮ-ನಿಮ್ಮ ಆರೋಗ್ಯ ಕಾಪಾಡಲು, ಪ್ರಾದೇಶಿಕ ಸಾರಿಗೆ ಕಛೇರಿಯ ಲೈಸೆನ್ಸ್ ವಿಭಾಗದ ಸೇವೆಗಳನ್ನು 50% ಕಡಿತ ಮಾಡಲಾಗಿದೆ.  ಪ್ರತಿ ದಿನ 50 ಕಲಿಕಾ ಲೈಸೆನ್ಸ್ ನೀಡುವಿಕೆ. (ಎಲ್.ಎಲ್.ಪರೀಕ್ಷೆ), 50 ಚಾಲನಾ ಅನುಜ್ಞಾ ಪತ್ರ ನೀಡುವಿಕೆ.(ಡಿ.ಎಲ್. ಪರೀಕ್ಷೆ) 50, ಚಾಲನಾ ಅನುಜ್ಞಾ ಪತ್ರ ನವೀಕರಣ  ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.

ಸಾರ್ವಜನಿಕರು, ಅರ್ಜಿಯೊಂದಿಗೆ ಮಾಸ್ಕ್ ಧರಿಸಿ ಟ್ರರ್ಮಿನಲ್ ಸ್ಕ್ಯಾನಿಂಗ್ ಆದ ಮೇಲೆ ಕಛೇರಿ ಒಳಗಡೆ ಪ್ರವೇಶ ನೀಡಲಾಗುವುದು.  ಅರ್ಜಿದಾರರ ಜೊತೆ ಬೇರೆ ಯಾರಿಗೂ ಪ್ರವೇಶವಿರುವುದಿಲ್ಲ.  ಜೂನ್-30 ರವರೆಗೆ ಚಾಲನಾ ಅನುಜ್ಞಾ ಪತ್ರ ಅವಧಿ ಚಾಲ್ತಿ ಇರುವುದರಿಂದ ಸಾರ್ವಜನಿಕರು ಚಾಲನಾ ಅನುಜ್ಞಾ ಪತ್ರದ ಅವಧಿ ಮುಗಿದಿದೆ ಎಂದು ಭಯ ಪಡುವ ಅಗತ್ಯವಿಲ್ಲ.  ಹೊಸ ಕಲಿಕಾ ಲೈಸೆನ್ಸ್ ಪರೀಕ್ಷೆಗಳ ಸ್ಲಾಟ್ ಜೂನ್-15 ನಂತರ ನೀಡಲಾಗುವುದು.  ಹಳೆ ಸ್ಲಾಟ್ ದಿನಾಂಕದ ಅಭ್ಯರ್ಥಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು.  ಸಾರ್ವಜನಿಕರು ಕಛೇರಿ ಸಿಬ್ಬಂದಿಗಳ ಜೊತೆ ಸಹಕಾರ ನೀಡಬೇಕೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಆರ್.ಎಂ.ವರ್ಣೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಗಳೂರು ಆರ್.ಟಿಓ. ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*