For Daily updates Join Watsapp group by clicking this link
https://chat.whatsapp.com/LNdS3qwTHVYLnGnKXmfSCn
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್ 19 ಆರೋಗ್ಯ ತಪಾಸಣೆಗಾಗಿ ಮೊಬೈಲ್ ಫಿವರ್ ಕ್ಲಿನಿಕ್ ಗೆ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಎಂಬಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಬಂಟ್ವಾಳ ತಾಲೂಕಿನ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಸರ್ಕಾರಿ ವೈದ್ಯರು ಲಭ್ಯವಿಲ್ಲದೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಆರೋಗ್ಯ ಸೇವೆಯನ್ನು ಇದು ನೀಡಲಿದೆ. ಈ ಸಂದರ್ಭ ಡಾ. ಹೇಮಪ್ರಭಾ, ಡಾ. ಇರ್ಫಾನಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 20 ಮಂದಿ ಇದರ ಪ್ರಯೋಜನ ಪಡೆದರು. ಪ್ರತಿ ಮಂಗಳವಾರ ಪೂರ್ವಾಹ್ನ 10ರಿಂದ 12 ಗಂಟೆವರೆಗೆ ಸಿದ್ಧಕಟ್ಟೆ ಬಸ್ ನಿಲ್ದಾಣದ ಮುಂಭಾಗ, ಅಪರಾಹ್ನ 2ರಿಂದ 4 ಗಂಟೆವರೆಗೆ ಉಳಿ ಗ್ರಾಮ ಪಂಚಾಯಿತಿ ಮುಂಭಾಗ ಮೊಬೈಲ್ ಫಿವರ್ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ವಿನಂತಿಸಿಕೊಂಡಿದ್ದಾರೆ.
Be the first to comment on "ಜ್ವರ ತಪಾಸಣೆಯ ಸಂಚಾರಿ ಚಿಕಿತ್ಸಾಲಯಕ್ಕೆ ಸಿದ್ಧಕಟ್ಟೆಯಲ್ಲಿ ಚಾಲನೆ, ಬಂಟ್ವಾಳ ತಾಲೂಕಿನಲ್ಲಿ ಎಲ್ಲೆಲ್ಲಿ ಸಂಚರಿಸಲಿದೆ? ಇಲ್ಲಿದೆ ವಿವರ"