



















ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು, ಖ್ಯಾತ ಕಲಾವಿದರು ಆಗಮಿಸಿ, ಕ್ಷೇತ್ರ ಸಂದರ್ಶಿಸಲಿದ್ದಾರೆ. ಪ್ರತಿದಿನದ ಕಾರ್ಯಕ್ರಮಗಳ ಪ್ರಮುಖ ವಿವರ ಇಲ್ಲಿದೆ.
ಮಾರ್ಚ್ 30, ಸೋಮವಾರ:
ಮಧ್ಯಾಹ್ನ 3.30ಕ್ಕೆ ಗ್ರಾಮ ದೈವಸ್ಥಾನ ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಸನ್ನಿಧಿಯಿಂದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿವಿಧ ಮಠಾಧೀಶರು, ಗಣ್ಯಮಾನ್ಯರ ನೇತೃತ್ವದಲ್ಲಿ ಸಂಘ, ಸಂಸ್ಥೆಗಳು, ನೃತ್ಯ ಭಜನಾ ತಂಡಗಳು, ಕೇರಳ ಚಂಡೆ, ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವದೊಂದಿಗೆ ಆಕರ್ಷಕ ಹಸಿರುವಾಣಿ ಮೆರವಣಿಗೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸುವರು. ಈ ವೇಳೆ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಸಂಜೆ 4 ಗಂಟೆಗೆ ಕ್ಷೇತ್ರಕ್ಕೆ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ. 5ರಿಂದ ಶಿಲ್ಪಿ, ಮೇಸ್ತ್ರಿಗಳಿಂದ ಪರಿಗ್ರಹ, ದೇವತಾ ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಶಾಸ್ತಾರ ಲಿಂಗಗಳ ಜಲಾಧಿವಾಸ, ಪ್ರಾಕಾರ ಬಲಿ, ರಾತ್ರಿ ಪೂಜೆ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಕರೋಪಾಡಿ ಶ್ರೀ ಮಲರಾಯ ದೈವಸ್ಥಾನ ಮತ್ತು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ಟ ವಹಿಸುವರು. ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರದ್ಧಾ ಅಮಿತ್ ಶುಭಾಶಂಸನೆಗೈಯುವರು. ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಎಡೆಕ್ಕಾನ ಮಹಾಬಲೇಶ್ವರ ಭಟ್, ಮೂಡುಬಿದಿರೆಯ ಜ್ಯೋತಿಷಿ ಡಾ. ಯೋಗಿ ಸುಧಾಕರ ತಂತ್ರಿ, ವಿಟ್ಲ ನವಿಲುಬಸದಿ ಅಧ್ಯಕ್ಷ ಜಿತೇಶ್ ಎಂ, ವಿಟ್ಲದ ಎಸಿಇ ಬಿಲ್ಡರ್ಸ್ ಮಾಲೀಕ ದರ್ಶನ್ ಜೆ, ಧರ್ಮಸ್ಥಳ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಇಒಐಟಿ ಪೂರನ್ ವರ್ಮ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಮತ್ತು ಕರೋಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಅನೆಯಾಲಕೋಡಿ ವಿಘ್ನೇಶ್ವರ ಭಟ್ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಜ್ಯೂನಿಯರ್ ಶಂಕರ್ ಮತ್ತು ಬಳಗದಿಂದ ಗಿಲಿಗಿಲಿ ಮ್ಯಾಜಿಕ್ ನಡೆಯಲಿದೆ.
ಮಾರ್ಚ್ 31, ಮಂಗಳವಾರ:
ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮಗಳು ಆರಂಭ, ಚಂಡಿಕಾಯಾಗ, ಮಧ್ಯಾಹ್ನ ಪೂಜೆ, ಸಂಜೆ 5ರಿಂದ ಅಂಕುರ ಪೂಜೆ, ರಾತ್ರಿ ಪೂಜೆ, ಶ್ರೀ ದುರ್ಗಾಪೂಜೆ, ಅನುಜ್ಞಾಕಲಶ ಪೂರಣೆ, ಅಧಿವಾಸಹೋಮ ನಡೆಯಲಿದೆ. ಬೆಳಗ್ಗೆ 8.30ರಿಂದ ಭಜನೆ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಶಿವಭಕ್ತ ವೀರಮಣಿ. ಮಧ್ಯಾಹ್ನ 2.30ರಿಂದ ನಯನಗೌರಿ ಸೇರಾಜೆ ಮತ್ತು ಬಳಗದ ಸುಗಮ ಸಂಗೀತ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ, ಮಾತೃಸಂಗಮ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಕರೋಪಾಡಿ ಗ್ರಾಪಂ ಅಧ್ಯಕ್ಷೆ ಸೂರ್ಯಕಾಂತಿ ದೀಪಪ್ರಜ್ವಲನ ಮಾಡುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ದೆಹಲಿಯ ವಾಗ್ಮಿ ಕಾಜಲ್ ಹಿಂದುಸ್ತಾನಿ ಧಾರ್ಮಿಕ ಉಪನ್ಯಾಸ ನೀಡುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್, ಬೆಂಗಳೂರಿನ ಸುಮನಾ ಫೌಂಡೇಶನ್ ಅಧ್ಯಕ್ಷೆ ಡಾ. ಸುನಿತಾ ಮಂಜುನಾಥ, ಪತ್ರಕರ್ತೆ ಶೋಭಾ ಮಳವಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಪಂ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ, ಯಮುನಾ ಬೋರ್ ವೆಲ್ಸ್ ಮಾಲಕಿ ಕಾವ್ಯ ಕೃಷ್ಣ ಶೆಟ್ಟಿ ಆಹ್ವಾನಿತ ಮುಖ್ಯ ಅತಿಥಿಗಳಾಗಿದ್ದಾರೆ.
ಸಂಜೆ 7ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಮತ್ತು ವಿದುಷಿ ಚೈತ್ರ ಈಶಾನ್ಯ ಪದ್ಯಾಣ ಅವರ ನಿರ್ದೇಶನದಲ್ಲಿ ಪದಯಾನ ತಂಡದ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ರಿಂದ ಶಿವಸಂಭೂತ ನೃತ್ಯ ನಾಟಕ ಲಕ್ಷ್ಮೀ ಗುರುರಾಜ್ ಉಡುಪಿ ನಿರ್ದೇಶನದಲ್ಲಿ ನಡೆಯಲಿದೆ.
ಏಪ್ರಿಲ್ 1, ಬುಧವಾರ:
ಪಳ್ಳದಕೋಡಿ ಮತ್ತು ಕುರುಡಪದವು ತಂಡಗಳಿಂದ ಭಜನೆ ಬಳಿಕ ಬೆಳಗ್ಗೆ 9.30ರಿಂದ ಮಂಜೇಶ್ವರದ ಶ್ರೀ ವಿಷ್ಣು ಯಕ್ಷಬಳಗ ತಂಡದಿಂದ ಇಂದ್ರಜಿತುಕಾಳಗ ಯಕ್ಷಗಾನ ತಾಳಮದ್ದಳೆ ಇರಲಿದೆ. ಮಧ್ಯಾಹ್ನ 1.30ರಿಂದ ಅದಿತಿ ಕೋಂಕೋಡಿ ಬಳಗದ ಶಾಸ್ತ್ರೀಯ ಸಂಗೀತ, 2.30ರಿಂದ ವಿದುಷಿ ಡಾ. ನಿಶಿತಾ ಪುತ್ತೂರು ನಿರ್ದೇಶನದ ನೃತ್ಯನಿರತ ಪುತ್ತೂರು ತಂಡದಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಸಂಜೆ 4.30ಕ್ಕೆ ಸುಧರ್ಮ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪಪ್ರಜ್ವಲನ ಮಾಡುವರು. ಮಲಾರುಬೀಡು ಯಜಮಾನ ಕರಿಯಣ್ಣ ಪಕ್ಕಳ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಉಪನ್ಯಾಸವನ್ನು ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ನೀಡುವರು. ಶ್ರೀ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟಿ ನರೇಶ್ ಕುಮಾರ್ ಗೌರವ ಉಪಸ್ಥಿತಿ ಇರಲಿದೆ. ಅಭ್ಯಾಗತರಾಗಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿಶೋರ್ ಕುಮಾರ್ ಪುತ್ತೂರು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸೌಂದರ್ಯ ಎಜುಕೇಶನ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಸೌಂದರ್ಯ ಮಂಜಪ್ಪ, ಹರಿಹರಪುರ ಪ್ರಭೋದಿನಿ ಗುರುಕುಲ ವ್ಯವಸ್ಥಾಪಕ ಉಮೇಶ್ ರಾವ್, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ, ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಉಳ್ಳಾಲ ಕಾಪಿಕ್ಕಾಡು ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಕೆಎಂಎಫ್ ನಿರ್ದೇಶಕ ನಂದರಾಮ ರೈ, ಪಾಣೆಮಂಗಳೂರು ರೈತ ಸೇವಾ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಅಗ್ರಜ ಬಿಲ್ಡರ್ ನ ಸಂದೇಶ್ ಶೆಟ್ಟಿ, ಬನಾರಿ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ, ನಿರ್ವಹಣಾ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ್ ಪಿ.ಎಸ್, ಉದ್ಯಮಿ ಮಾಧವ ಮಾವೆ ಭಾಗವಹಿಸುವರು. ಬಳಿಕ ಡಾ. ವಿನಯಾ ಪದ್ಯಾಣ ಮತ್ತು ಬಳಗದಿಂದ ಭಕ್ತಿಗಾನ ಸುಧಾ ನಡೆಯಲಿದೆ.
ಏಪ್ರಿಲ್ 2, ಗುರುವಾರ
ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮ, 8.30ರಿಂದ ಬಾಯಾರು ಮತ್ತು ಚಿಪ್ಪಾರು ತಂಡಗಳ ಭಜನೆ, ಬಳಿಕ ರಂಜನ್ ವಗೆನಾಡು ಬಳಗದ ಭಕ್ತಿಸಂಗೀತ, ಮಚ್ಚೇಂದ್ರನಾಥ ಕನ್ಯಾನ ಬಳಗದ ಸ್ಯಾಕ್ಸೋಫೋನ್ ಕಛೇರಿ. ಮಧ್ಯಾಹ್ನ 1.30ರಿಂದ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಸಂಜಯ ರಾಯಭಾರ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಸಂಜೆ 4.30ಕ್ಕೆ ನಡೆಯುವ ಸುಧರ್ಮ ಸಭೆಯಲ್ಲಿ ಶ್ರೀ ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ಮಾಡಲಿದ್ದು, ಹಿರಿಯ ವೈದಿಕ ವಿದ್ವಾಂಸ ಬೋಳಂತಕೋಡಿ ರಾಮ ಭಟ್ ದೀಪ ಪ್ರಜ್ವಲನ ಮಾಡುವರು. ಅಧ್ಯಕ್ಷತೆಯನ್ನು ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸುವರು. ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಮನಾರಾಯಣ ಜೋಷಿ ಧಾರ್ಮಿಕ ಉಪನ್ಯಾಸ ನೀಡುವರು. ಮಾಜಿ ಸಚಿವ ಬಿ.ರಮಾನಾಥ ರೈ ಶುಭಾಶಂಸನೆ ಮಾಡುವರು. ವಿಟ್ಲ ಅರಮನೆಯ ಬಂಗಾರಅರಸರು ಮತ್ತು ನಂದಾವರ ಕ್ಷೇತ್ರದ ಪ್ರಧಾನ ಅರ್ಚಕ ಮಹೇಶ್ ಭಟ್ ಗೌರವ ಉಪಸ್ಥಿತರಿರುವರು.
ಅಭ್ಯಾಗತರಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉದ್ಯಮಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಉದ್ಯಮಿಗಳಾದ ಉಜ್ವಲ್ ಪ್ರಭು, ಸಂತೋಷ್ ರೈ ಬೋಳಿಯಾರ್, ಅಜಯ್ ಪುರುಷೋತ್ತಮ ಶೆಟ್ಟಿ, ಕೆಎಂಎಫ್ ನಿರ್ದೇಶಕ ಸುಧಾಕರ ರೈ ಬೋಳಂತೂರು, ನಂದಾವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಚಿಪ್ಪಾರು ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಬಲ್ಲಾಳ್, ಬನಾರಿ ಕ್ಷೇತ್ರದ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅತಿಥಿಗಳಾಗಿರುವರು. ಬಳಿಕ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೂರ್ಯಗಾಯತ್ರಿ ಮತ್ತು ಬಳಗದ ಭಕ್ತಿಗಾನ ಸಂಭ್ರಮ ನಡೆಯಲಿದೆ.
ಏಪ್ರಿಲ್ 3, ಶುಕ್ರವಾರ
ವೈದಿಕ ಕಾರ್ಯಕ್ರಮಗಳಲ್ಲಿ ಬೆಳಗ್ಗೆ 7ರಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಅಂಕುರಪೂಜೆ, ಶಯ್ಯಾಪೂಜೆ, 10.56ರಿಂದ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು, ಶ್ರೀ ಮಹಾಗಣಪತಿ, ಶ್ರೀ ಶಾಸ್ತಾರ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಜೀವಕಲಶಾಬಿಷೇಕ, ಅಷ್ಟಮಂಗಲ ದರ್ಶನ, ಗೋದರ್ಶನ, ನಿದ್ರಾಕಲಶಾಭಿಷೇಕ, ಕುಂಭೇಶಕಲಶಾಭಿಷೇಕ, ಆವಾಹನಾದಿಗಳು, ನ್ಯಾಸಾದಿಗಳು, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಪ್ರಸನ್ನ ಪೂಜೆ, ರುದ್ರಹೋಮ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ, ಸಂತರ್ಪಣೆ ಇರಲಿದೆ. ಸಂಜೆ 5ರಿಂದ ಕ್ಷೇತ್ರಾನುಷ್ಠಾನ ಪದ್ಧತಿ ನಿರ್ಣಯ, ಭದ್ರದೀಪ ಪ್ರತಿಷ್ಠೆ, ಪ್ರಾರ್ಥನೆ, ಕವಾಟಬಂಧನ, ಸೋಪಾನಪೂಜೆ, ಅಂಕುರಪೂಜೆ, ಶ್ರೀ ದುರ್ಗಾಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೆಳಗ್ಗೆ 8.30ರಿಂದ ಚಿಪ್ಪಾರು ಮತ್ತು ಬಾಯಾರು ತಂಡಗಳ ಭಜನೆ, ಡಾ. ಮಹೇಶ ಪದ್ಯಾಣ ಮತ್ತು ತಂಡದಿಂದ ಗಾಯನ, ಸಂಗೀತ ವಾಹಿನಿ, ಮಧ್ಯಾಹ್ನ 1.30ರಿಂದ ಎ.ಕೆ.ಉಮಾನಾಥ ದೇವಾಡಿಗ ಅಶ್ವಥಪುರ ಮತ್ತು ಬಳಗದ ನಾದಸ್ವರ ಕಛೇರಿ, 2.30ರಿಂದ ಮಧುಮಿತ ಪಡುಮಲೆ ಮತ್ತು ತನ್ಮಯಿ ಉಪ್ಪಂಗಳ ಅವರಿಂದ ವೀಣೆ ಮತ್ತು ವಯೋಲಿನ್ ಕಛೇರಿ.
ಸಂಜೆ 4.30ರಿಂದ ಸುಧರ್ಮ ಸಭೆಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಒಡಿಯೂರು ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಷಿ ದೀಪಪ್ರಜ್ವಲನ ಮಾಡುವರು. ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸುವರು. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ, ಕದ್ರಿ ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಅಡಿಗ ಗೌರವ ಪಸ್ಥಿತಿಯಲ್ಲಿ ಅಯೋಧ್ಯೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಗೋಪಾಲ್ ಜಿ ಧಾರ್ಮಿಕ ಉಪನ್ಯಾಸ ನೀಡುವರು. ಮೈಸೂರು ಸಂಸದ ಹಾಗೂ ಮೈಸೂರು ಸಂಸ್ಥಾನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಕುಂಬ್ಳೆ ಮುಂಡಪಳ್ಳ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕ್ಕಾರ್ ಶುಭಾಶಂಸನೆ ಮಾಡುವರು.
ಅಭ್ಯಾಗತರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರು ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ರೈ, ಉದ್ಯಮಿ ಬಲರಾಮ ಆಚಾರ್ಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಶ್ರೀಕಾಂತ ಶೆಟ್ಟಿ ಸಂಕೇಶ, ಬಾಯಾರು ದೇವಸ್ಥಾನದ ಮೊಕ್ತೇಸರ ಪೆರುವಡಿ ರಾಮಕೃಷ್ಣ ಭಟ್ ಮತ್ತು ದೇಲಂತಮಜಲು ಕ್ಷೇತ್ರ ಆಡಳಿತ ಮೊಕ್ತೇಸರ ಗಣೇಶ ಭಟ್ ದೇಲಂತಮಜಲು ಭಾಗವಹಿಸುವರು. ಸಂಜೆ 7ರಿಂದ ಪಾವಂಜೆ ಮೇಳದಿಂದ ತ್ರಿಪುರ ಮಥನ ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 4, ಶನಿವಾರ
ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮಗಳು, ಗೀತಾಜ್ಞಾನಯಜ್ಞ, ಸಂಜೆ ಬ್ರಹ್ಮಕಲಶ ಮಂಟಪ ಶಂಸ್ಕಾರ, ಮಂಡಲ ರಚನೆ ಕಾರ್ಯಕ್ರಮಗಳು ನಡೆಯಲಿದೆ.
ಬೆಳಗ್ಗೆ 8.30ರಿಂದ ಬೇಡಗುಡ್ಡೆ ಮತ್ತು ವಗೆನಾಡು ಗಂಡಗಳ ಭಜನೆ, ಬಳಿಕ ವಿದ್ಯಾಜಯರಾಮ ಕಜೆ ಬಳಗದಿಂದ ಭಕ್ತಿ ಸಂಗೀತ. ಮಧ್ಯಾಹ್ನ 1.30ರಿಂದ ಪ್ರಸಾದ್ ಬಾಯಾರು ಬಳಗದ ಹರಿನಾಮ ಸಂಕೀರ್ತನೆ, ಬಾಲಕೃಷ್ಣ ಮಂಜೇಶ್ವರ ಶಿಷ್ಯೆ ಆದ್ಯಗೌರಿ ಅಡ್ಕತ್ತಿಮಾರು ಮತ್ತು ಬಳಗದಿಂದ ನೃತ್ಯಾಮೃತಂ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆಯಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಹಾರಾಜ್ ಆಶೀರ್ವಚನ ನೀಡುವರು. ಕಟೀಲು ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ದೀಪಪ್ರಜ್ವಲನ ಮಾಡುವರು. ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಅಧ್ಯಕ್ಷತೆಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಧಾರ್ಮಿಕ ಉಪನ್ಯಾಸ ನೀಡುವರು. ಕರ್ನಾಟಕ ರಾಜ್ಯ ಗ್ರಾಹಕ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಶಿವಶಂಕರೇಗೌಡ ಹಾಗೂ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಶುಭಾಶಂಸನೆ ಮಾಡುವರು. ಅಭ್ಯಾಗತರಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶ್ರೀಪಾದ್ ಯೆಸ್ಸೊ ನಾಯಕ್, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ, ಹೈಕೋರ್ಟ್ ಹಿರಿಯ ವಕೀಲರಾದ ಶಾಮಸುಂದರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ಮುಂಬೈ ನಗರಸೇವಕ್ ಸಂತೋಷ್ ಶೆಟ್ಟಿ ದಳಂದಿಲ, ಮುಂಬಯಿ ಉದ್ಯಮಿ ರವೀಂದ್ರನಾಥ ಎಂ. ಭಂಡಾರಿ, ಮೂಡುಬಿದಿರೆ ಉದ್ಯಮಿ ಶ್ರೀಪತಿ ಕೆ. ಭಟ್, ಹಿರಿಯ ವಕೀಲ ಶಂಭು ಶರ್ಮ, ಮಂಜೇಶ್ವರ ಸಂತಡ್ಕ ಕ್ಷೇತ್ರ ಅಧ್ಯಕ್ಷ ಡಾ. ಶ್ರೀಧರ ಭಟ್ ಮಾವೆ, ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್, ಗೋಳ್ತಮಜಲು ಗುರುಶಿವ ಕ್ಷೇತ್ರ ಆಡಳಿತ ಮೊಕ್ತೇಸರ ಡಾ. ರಾಮಕೃಷ್ಣ ಶೆಟ್ಟಿ ಭಾಗವಹಿಸುವರು. ಸಂಜೆ 7ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಏಪ್ರಿಲ್ 5, ಭಾನುವಾರ
ಬೆಳಗ್ಗೆ 7ರಿಂದ ಆರಂಭಗೊಳ್ಳುವ ವೈದಿಕ ಕಾರ್ಯಕ್ರಮಗಳಲ್ಲಿ ಶ್ರೀ ಶಿವಪಂಚಾಕ್ಷರಿ ಮತ್ತು ಶ್ರೀ ಶಕ್ತಿಪಂಚಾಕ್ಷರಿ ಹವನ ಇರಲಿದೆ. ಸಂಜೆ 5ರಿಂದ ಬ್ರಹ್ಮಕುಂಭ ಪೂರಣೆ, ಸಹಿತ ಹಲವು ಕಾರ್ಯಕ್ರಮಗಳಿವೆ.
ಬೆಳಗ್ಗೆ 8.30ರಿಂದ ಒಡಿಯೂರು, ಕುಡ್ಪಲ್ತಡ್ಕ ತಂಡಗಳ ಭಜನೆ, 9.30ರಿಂದ ಪದ್ಯಾಣ ವೈಭವ ನಡೆಯುವುದು. ಮಧ್ಯಾಹ್ನ 1.30ರಿಂದ ಕೊಳಲು ಮತ್ತು ಪಿಟೀಲು ಕಚೇರಿ ಅರವಿಂದ ರಮೇಶ್ ಕೊಮ್ಮೆ ಅವರಿಂದ ನಡೆಯಲಿದ್ದು, 2.30ರಿಂದ ಸ್ಮಿತಾ ಶ್ಋಈಪತಿ ಮತ್ತು ತಂಡದಿಂದ ಬೆಂಗಳೂರು ಅರ್ಥ ನೃತ್ಯಕಲಾ ಮಂದಿರ ವಿದ್ಯಾರ್ಥಿನಿಯರಿಂದ ನೃತ್ಯಕಾರ್ಯಕ್ರಮ ಇರಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮತ್ತು ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಹಟ್ಟಿಯಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಬಾಲಚಂದ್ರ ಭಟ್ ದೀಪಪ್ರಜ್ವಲನಗೈಯುವರು. ಅಧ್ಯಕ್ಷತೆಯನ್ನು ನೇಪಾಳ ಪಶುಪತಿನಾಥ ದೇವಸ್ಥಾನದ ವಿಶ್ರಾಂತ ಪ್ರಧಾನ ಅರ್ಚಕ ರಘುರಾಮ ಕಾರಂತ ವಹಿಸುವರು. ಪತ್ರಕರ್ತ ಅಜಿತ್ ಹನುಮಕ್ಕನವರ್ ಧಾರ್ಮಿಕ ಉಪನ್ಯಾಸ ನೀಡುವರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಶುಭಾಶಂಸನೆ ಮಾಡುವರು. ಅಭ್ಯಾಗತರಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ವಿ.ಸೋಮಣ್ಣ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧಪಕ್ಷ ಉಪನಾಯಕ ಸುನಿಲ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ.ನಿಕಟಪೂರ್ವ ಅಧ್ಯಕ್ಷ ಪ್ರಧೀಪ್ ಕುಮಾರ್ ಕಲ್ಕೂರ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಉದ್ಯಮಿ ರಘುನಾಥ ಸೋಮಯಾಜಿ, ಯಜ್ಞನಾರಾಯಣ ಹೇರಳೆ, ಕೊಲ್ಲೂರು ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ, ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಭಾಗವಹಿಸುವರು. ಸಂಜೆ 7ಕ್ಕೆ ಬೆಂಗಳೂರಿನ ಶಿವಶ್ರೀ ಸ್ಕಂದಪ್ರಸಾದ್ ಅವರಿಂದ ಶಿವಪದಯಾನ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 6, ಸೋಮವಾರ
ಬೆಳಗ್ಗೆ 7ರಿಂದ ಗಣಪತಿ ಹೋಮ ಪಂಚಾಮೃತಾಭಿಷೇಕ, ಶಾಂತಿಹೋಮಾದಿಗಳ ಕಲಶಾಭಿಷೇಕ, ತತ್ವಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಪರಿಕಲಶ ಸಹಿತ ದ್ರವ್ಯ ಕಲಶಾಭಿಷೇಕ, ಶತರುದ್ರ ಸಹಿತ ಬ್ರಹ್ಮಕುಂಭಾಭಿಷೇಕ, ಮಂತ್ರನ್ಯಾಸಾದಿಗಳು, ಮಹಾಬಲಿ ಪೀಠ ಪ್ರತಿಷ್ಠೆ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಸಂತರ್ಪಣೆ ನಡೆಯಲಿದೆ,
ಬೆಳಗ್ಗೆ ಆನೆಕಲ್ಲು ಮತ್ತು ಗುಂಡಮಜಲು ತಂಡಗಳ ಭಜನೆ, ಗಣಪತಿ ಪದ್ಯಾಣ ಬಳಗದಿಂದ ಕಾವ್ಯವಾಚನ, ಮಧ್ಯಾಹ್ನ 2.30ರಿಂದ ಜಗದೀಶ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಬೆಳಗ್ಗೆ 11ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಗೌರಿಗದ್ದೆ ಅವಧೂತ ವಿನಯ ಗುರೂಜಿ ಆಶೀರ್ವಚನ ನೀಡುವರು. ಅಭ್ಯಾಗತರಾಗಿ ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರ ಅಧ್ಯಕ್ಷ ರಾಜಾರಾಮ ಭಟ್, ಮುಳಿಯ ಗೋಲ್ಡ್ ಎಂಡ್ ಡೈಮಂಡ್ ಸಿಇಒ ಕೇಶವಪ್ರಸಾದ್ ಮುಳಿಯ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಮಾಣಿ ಶ್ರೀರಾಮಚಂದ್ರಾಪುರ ಮಠ ಅಧ್ಯಕ್ಷ ಹಾರೆಕೆರೆ ನಾರಾಯಣ ಭಟ್, ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್, ಹಿರಿಯ ವಕೀಲ ಎಸ್.ಎಂ.ಭಟ್, ಅನನ್ಯಫೀಡ್ಸ್ ನ ದಿವಾಣ ಗೋವಿಂದ ಭಟ್, ರಾಜ್ ಗ್ರೂಪ್ಸ್ ನ ಕೃಷ್ಣ ರಾಜ್, ಕಾಕುಂಜೆ ಸಾಫ್ಟ್ ವೇರ್ ನ ಕಾಕುಂಜೆ ಗೋಪಾಲಕೃಷ್ಣ ಭಟ್ ಭಾಗವಹಿಸುವರು.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ದೀಪಪ್ರಜ್ವಲನ ಮಾಡುವರು. ಡಿ.ಎಸ್.ಮಾಕ್ಸ್ ಪ್ರಾಪರ್ಟೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಎಸ್.ಪಿ.ದಯಾನಂದ ಶುಭ ಹಾರೈಸುವರು. ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸುವರು. ವಾಗ್ನಿ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡುವರು.
ಅಭ್ಯಾಗತರಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಯಶಪಾಲ್ ಸುವರ್ಣ, ಸತೀಶ್ ಕುಂಪಲ, ಉದ್ಯಮಿಗಳಾದ ಡಾ. ನವೀನ್ ಕುಮಾರ್, ಡಾ. ಶಿಲ್ಪಾ ನವೀನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಭಾಗವಹಿಸುವರು. ರಾತ್ರಿ ಹನುಮಗಿರಿ ಮೇಳದ ಶ್ರೀದೇವಿಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 7, ಮಂಗಳವಾರ
ಬೆಳಗ್ಗೆ 11ರಿಂದ ಕಡಬ, ಮಿತ್ತನಡ್ಕ ತಂಡಗಳ ಭಜನೆ, 11ರಿಂದ ಸೂಕ್ತಿ ಭಟ್ ಅವರಿಂದ ನಾದೋಪಾಸನೆ. ಮಧ್ಯಾಹ್ನ 2ರಿಂದ ಪದ್ಯಾಣದ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ. ಸಂಜೆ 4.30ರಿಂದ ಕಾರ್ಯಕರ್ತರ ಸಂಗಮ. ಅತಿಥಿಗಳಾಗಿ ವಿಹಿಂಪ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಮತ್ತು ಹಿಂದು ಜಾಗರಣಾ ವೇದಿಕೆ ಕರ್ನಾಟಕ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಭಾಗವಹಿಸುವರು. ಸಂಜೆ 7ರಿಂದ ಮಂಗಳೂರು ಶ್ರೀಲಲಿತೆ ಕಲಾವಿದರು ತಂಡದಿಂದ ಶ್ರೀಶನೀಶ್ವರ ಮಹಾತ್ಮೆ ನಾಟಕ ನಡೆಯಲಿದೆ.


Be the first to comment on "ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಏನೇನಿದೆ? ಆಹ್ವಾನ ಪತ್ರಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ – ಈ ಲಿಂಕ್ ಕ್ಲಿಕ್ ಮಾಡಿರಿ"